
ಮಲೇಬೆನ್ನೂರು: ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಹೊಲದ ಉಗ್ರಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 176 ಚೀಲ ಪಡಿತರ ಅಕ್ಕಿಯನ್ನು ಶನಿವಾರ ಜಪ್ತಿ ಮಾಡಿದ್ದಾರೆ.
ಸಮೀಪದ ಕುಂಬಳೂರು ಹೊರವಲಯದ ನಿಟ್ಟೂರು ರಸ್ತೆಯಲ್ಲಿನ ಇನಾಯತ್ ಎಂಬವರಿಗೆ ಸೇರಿದ ಹೊಲದ ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅಕ್ಕಿಯ ಮೌಲ್ಯ ₹1.80 ಲಕ್ಷ ಎಂದು ಅಂದಾಜು ಮಾಡಿದ್ದಾರೆ. ತನಿಖೆ ಮುಂದುವರೆದಿದೆ.
ಆಹಾರ ಇಲಾಖೆಯ ಶಿವಕುಮಾರ್, ಪಿಎಸ್‌ಐಗಳಾದ ಹಾರೂನ್ ಅಖ್ತರ್, ಶ್ರೀಪತಿ ಜಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.