ಹರಿಹರ: ಕೇರಳದ ಎರ್ನಾಕುಲಂನಲ್ಲಿ ಮೇ 3 ಮತ್ತು 4ರಂದು ನಡೆದ ಪ್ಯಾನ್ ಇಂಡಿಯಾ ಮಾಸ್ಟರ್ಸ್ 4ನೇ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹರಿಹರ ಬ್ರದರ್ಸ್ ಜಿಮ್‌ನ ಐವರು ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸಿ, 16 ಪದಕ ಜಯಿಸಿದ್ದಾರೆ.
93 ಕೆ.ಜಿ. ವಿಭಾಗದಲ್ಲಿ ಅಕ್ರಂಬಾಷ ಅವರು ಸ್ಕಾಂಟ್, ಬೆಂಚ್ ಪ್ರೆಸ್, ಡೆಡ್ ಲಿಫ್ಟಿಂಗ್ ವಿಭಾಗ ಹಾಗೂ ಉತ್ತಮ ಪ್ರದರ್ಶನ ಸೇರಿ 4 ಚಿನ್ನದ ಪದಕ, 55 ಕೆ.ಜಿ. ವಿಭಾಗದಲ್ಲಿ ವೆಂಕಟೇಶ್ ಜಿ.ರೆಡ್ಡಿ ಅವರು 4 ಬೆಳ್ಳಿ ಪದಕ, 66 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ರಫೀಕ್ ಅವರು 4 ಕಂಚಿನ ಪದಕ, 73 ಕೆ.ಜಿ. ವಿಭಾಗದಲ್ಲಿ ಸುನಿಲ್ ಕುಮಾರ್ ಎಂ.ಪಿ. ಅವರು 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಈ ಎಲ್ಲಾ ಐವರು ಕ್ರೀಡಾಪಟಯಗಳು ಮುಂಬರುವ ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ ಎಂದು ಬ್ರದರ್ಸ್ ಜಿಮ್‌ನ ಸಂಚಾಲಕ ಅಕ್ರಂಬಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.