ADVERTISEMENT

ಮತ ಚಲಾಯಿಸಿದ ತುಂಬು ಗರ್ಭಿಣಿಯರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 11:11 IST
Last Updated 23 ಏಪ್ರಿಲ್ 2019, 11:11 IST
ದಿವ್ಯಾ
ದಿವ್ಯಾ   

ದಾವಣಗೆರೆ: ತುಂಬು ಗರ್ಭಣಿಯರು ಮತ ಹಾಕಿ ಕರ್ತವ್ಯ ಪ್ರಜ್ಞೆ ಮೆರೆದರು.

9 ತಿಂಗಳ ಗರ್ಭಿಣಿ ಪ್ರತಿಭಾ ಶಿವನಗೌಡ ಪಾಟೀಲ ಅವರು ಪತಿ ಜತೆಗೆ ಬಂದು ದುರ್ಗಾಂಬಿಕಾ ದೇವಸ್ಥಾನದ ಬಳಿ 54ನೇ ಮತಗಟ್ಟೆಯಲ್ಲಿ ಓಟು ಮಾಡಿದರು. ವೈದ್ಯರು ಹೆರಿಗೆಗೆ ಏ.24ಕ್ಕೆ ದಿನ ಕೊಟ್ಟಿದ್ದಾರೆ. ಆದರೂ ದೇಶಕ್ಕಾಗಿ ಓಟು ಹಾಕಲು ಬಂದಿದ್ದೇನೆ ಎಂದು ಅವರು ತಿಳಿಸಿದರು.

8 ತಿಂಗಳ ಗರ್ಭಿಣಿ ಸರಸ್ವತಿನಗರದ ದಿವ್ಯಾ ವಿಜಯಕುಮಾರ್‌ ಮಂಗಳವಾರ ನಿಟುವಳ್ಳಿ ದುರ್ಗಾಂಬಿಕಾ ಶಾಲೆಯಲ್ಲಿ ಮತ ಚಲಾಯಿಸಿದರು.

ADVERTISEMENT

ಮದುವೆಗೆ ಮುಂಚೆ ಚಿತ್ರದುರ್ಗದಲ್ಲಿರುವ ತಾಯಿ ಮನೆಯಲ್ಲಿ ಮತ ಚಲಾಯಿಸಿದ್ದೆ. ವರ್ಷದ ಹಿಂದೆ ಮದುವೆಯಾಗಿ ಇಲ್ಲಿ ಬಂದೆ. ನಮ್ಮ ಕರ್ತವ್ಯವನ್ನುನಿರ್ವಹಿಸಬೇಕು ಎಂದು ಮತ ಹಾಕಲು ಬಂದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.