ನ್ಯಾಮತಿ: ಮೀಸಲಾತಿ ಹಂಚಿಕೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ ಬಂಜಾರ ಸೇವಾ ಸಂಘದ ತಾಲ್ಲೂಕು ಘಟಕದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಂಜಾರ ಸಮುದಾಯದ ನೈಜ ಜನಸಂಖ್ಯೆಯನ್ನು ಪರಿಗಣಿಸದೇ ಮೀಸಲಾತಿ ನಿಗದಿಪಡಿಸಿ ಅನ್ಯಾಯ ಮಾಡಲಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಘೋಷಣೆಗಳನ್ನು ಕೂಗುತ್ತಾ ಮಹಾಂತೇಶ್ವರ ದೇವಸ್ಥಾನದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ, ತಹಶೀಲ್ದಾರ್ ಎಂ.ಪಿ.ಕವಿರಾಜ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾಲೂರು ಸೇನಾಭಗತ್ ಮಹಾರಾಜ್, ಬಂಜಾರ ಸೇವಾ ಸಂಘದ ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶನಾಯ್ಕ, ಗೌರವಾಧ್ಯಕ್ಷರಾದ ದೂದ್ಯಾನಾಯ್ಕ ಮತ್ತು ತತ್ಯಾನಾಯ್ಕ, ಕಾರ್ಯದರ್ಶಿ ಸಂತೋಷನಾಯ್ಕ, ಮುಖಂಡರಾದ ಶಿವರಾಮನಾಯ್ಕ, ಬೋಜ್ಯನಾಯ್ಕ, ಪೀರ‍್ಯಾನಾಯ್ಕ, ಗೋಪಾಲನಾಯ್ಕ, ಮುರುಗೇಂದ್ರ ನಾಯ್ಕ, ಸುರೇಂದ್ರನಾಯ್ಕ, ಮಾರುತಿನಾಯ್ಕ, ಬೋಪಾಲನಾಯ್ಕ, ಓಂಕಾರನಾಯ್ಕ ಹಾಗೂ ವಿವಿಧ ತಾಂಡಾಗಳ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.