ADVERTISEMENT

ಜಗಳೂರು | ಖಾಸಗಿ ಬಸ್‌ಗೂ ‘ಶಕ್ತಿ’ ಯೋಜನೆ ವಿಸ್ತರಿಸಲಿ: ಖಾಸಗಿ ಬಸ್ ಮಾಲೀಕರ ಸಂಘ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:21 IST
Last Updated 26 ಅಕ್ಟೋಬರ್ 2025, 6:21 IST
ಜಗಳೂರಿನಲ್ಲಿ ಶನಿವಾರ ಖಾಸಗಿ ಬಸ್ ಮಾಲೀಕರ ಸಂಘದಿಂದ ಪತ್ರಕರ್ತರಿಗೆ ಉಚಿತ ಖಾಸಗಿ ಬಸ್ ಪಾಸ್ ವಿತರಿಸಲಾಯಿತು
ಜಗಳೂರಿನಲ್ಲಿ ಶನಿವಾರ ಖಾಸಗಿ ಬಸ್ ಮಾಲೀಕರ ಸಂಘದಿಂದ ಪತ್ರಕರ್ತರಿಗೆ ಉಚಿತ ಖಾಸಗಿ ಬಸ್ ಪಾಸ್ ವಿತರಿಸಲಾಯಿತು   

ಜಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರವಾಸ ಸೌಲಭ್ಯವನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವ ಮೂಲಕ ತೆರಿಗೆ ವಿನಾಯಿತಿ ನೀಡಬೇಕು ಎಂದು ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಖಾಸಗಿ ಬಸ್ ಮಾಲೀಕರ ಸಂಘದಿಂದ ಪತ್ರಕರ್ತರಿಗೆ ಉಚಿತ ಖಾಸಗಿ ಬಸ್ ಪಾಸ್ ವಿತರಿಸಿ ಮಾತನಾಡಿದರು.

ರಾಜ್ಯದ 9 ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಬಸ್‌ಗಳಿದ್ದು, ಅಂದಾಜು 9,000 ಖಾಸಗಿ ಬಸ್ ಸಂಚರಿಸುತ್ತಿವೆ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಖಾಸಗಿ ಬಸ್ ಅವಲಂಬಿಸಿ ಏಜೆಂಟ್, ಗ್ಯಾರೇಜ್, ಚಾಲಕರು ಸೇರಿ ಸಾವಿರಾರು ಕುಟುಂಬಗಳಿಗೆ ದುಡಿಮೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರಿ ಬಸ್ ಸಂಚಾರಕ್ಕೆ ನಮ್ಮ ವಿರೋಧವಿಲ್ಲ. ಗ್ರಾಮೀಣ ಭಾಗಗಳಿಗೂ ಸರ್ಕಾರಿ ಬಸ್ ಕಲ್ಪಿಸಬೇಕಿದೆ. ಸಚಿವರು, ಶಾಸಕರ ಒತ್ತಡದಿಂದ ಸರ್ಕಾರಿ ಆದೇಶಗಳನ್ನು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ತಿರುಚುತ್ತಿದ್ದಾರೆ’ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಪಲ್ಲಾಗಟ್ಟೆ ಹೆಚ್.ಸಿ ಮಹೇಶ್ ಹೇಳಿದರು.

ಗೌರವಾಧ್ಯಕ್ಷ ಕಮ್ಮತ್ತಹಳ್ಳಿ ಮಂಜುನಾಥ್ ಪದಾಧಿಕರಿಗಳಾದ ಅಸ್ಲಾಂ, ಎಂ.ಆರ್. ಸತೀಶ್, ಎಂ.ಎನ್. ವೀರೇಂದ್ರ ಪಾಟೀಲ್, ಜಿಲಾನ್ ಬೇಗ್, ನಿರ್ದೇಶಕ ಅಬೂಬಕರ್ ಸಿದ್ದಿಕ್, ಎಚ್.ಜಿ. ವೀರೇಶ್, ಸೈಯದ್ ಅನ್ವರ್, ಜಗದೀಶ್ ರೆಡ್ಡಿ, ಅಶೋಕ, ಸಾತ್ವಿಕ್, ಬಪೀರ್ ಭಾಷಾ, ಏಜೆಂಟ್ ಮುಕುಂದ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ಪದಾಧಿಕಾರಿಗಳಾದ ಅಣಬೂರು ಕೊಟ್ರೇಶ್, ಎಚ್.ಆರ್. ಬಸವರಾಜ್, ರವಿಕುಮಾರ್, ಕೆ.ಎಂ. ಜಗದೀಶ್, ಮರೇನಹಳ್ಳಿಬಾಬು, ಧನ್ಯಕುಮಾರ್, ಮಾರುತಿ, ಶಿವಲಿಂಗಪ್ಪ, ಮಾದಿಹಳ್ಳಿ ಮಂಜಪ್ಪ, ಬಸವರಾಜ್, ಸಂದೀಪ್, ಸಿದ್ದಮ್ಮನಹಳ್ಳಿ ಬಿ. ಬಸವರಾಜ್, ಜೀವನ್, ಮಾರಪ್ಪ, ಮಹಾಂತೇಶ್ ಬ್ರಹ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.