ADVERTISEMENT

ಚಿಣ್ಣರಿಗೆ ಆರತಿ ಬೆಳಗಿ ಬರಮಾಡಿಕೊಂಡ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 4:45 IST
Last Updated 26 ಅಕ್ಟೋಬರ್ 2021, 4:45 IST
ಆನಂದಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1ರಿಂದ 5ರವರೆಗಿನ ತರಗತಿಯ ಮಕ್ಕಳನ್ನು ಉಪ ಪ್ರಾಂಶುಪಾಲರಾದ ಪುಷ್ಪಾ ಅವರು ಆರತಿ ಬೆಳಗಿ ಸ್ವಾಗತಿಸಿದರು.
ಆನಂದಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1ರಿಂದ 5ರವರೆಗಿನ ತರಗತಿಯ ಮಕ್ಕಳನ್ನು ಉಪ ಪ್ರಾಂಶುಪಾಲರಾದ ಪುಷ್ಪಾ ಅವರು ಆರತಿ ಬೆಳಗಿ ಸ್ವಾಗತಿಸಿದರು.   

ಆನಂದಪುರ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ 1ರಿಂದ 5ರವರೆಗಿನ ತರಗತಿಯ ಮಕ್ಕಳಿಗೆ ಉಪ ಪ್ರಾಂಶುಪಾಲರಾದ ಪುಷ್ಪಾ ಆರತಿ ಬೆಳಗಿ ಮಕ್ಕಳನ್ನು ಸ್ವಾಗತಿಸಿದರು

ಪಟ್ಟಣದ ವಿವಿಧ ಶಾಲೆಗಳ ಕೊಠಡಿಗಳ ಮುಂದೆ ರಂಗೋಲಿ ಹಾಕಲಾಗಿತ್ತು. ಮಕ್ಕಳನ್ನು ಹೂ ನೀಡಿ ಬರಮಾಡಿಕೊಂಡರು. ಜೋತೆಗೆ ಕೊಠಡಿಗಳ ಸ್ಚಚ್ಚತೆಗೆ ಹೆಚ್ಚಿನ ಗಮನ ನೀಡಲಾಗಿದೆ.

ಮುಖ್ಯ ಶಿಕ್ಷಕ ಟೀಕಪ್ಪ ಮಾತನಾಡಿ, ‘ಇಲ್ಲಿ ಬಹಳ ಸಂಖ್ಯೆಯ ಮಕ್ಕಳು ಇರುವುದರಿಂದ ಅಂತರ ಕಾಯ್ದುಕೊಂಡು ಮಕ್ಕಳನ್ನು ಕುಳ್ಳರಿಸಲು ಕೊಠಡಿ ಸಮಸ್ಯೆ ಇದೆ. ಕರ್ನಾಟಕ ಪಬ್ಬಿಕ್ ಶಾಲೆಯ ಆವರಣದಲ್ಲಿ ಈಗಾಗಲೇ ಕಾಮಗಾರಿ ಮುಗಿದಿರುವ ಹೊಸ ಕಟ್ಟಡಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದರೆ ಕೊಠಡಿ ಸಮಸ್ಯೆ ಹೊಗಲಾಡಿಸಬಹುದು. ಇರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿ ಬೋಧನೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

2ನೇ ತರಗತಿ ವಿದ್ಯಾರ್ಥಿ ಕೆವಿನ್ ನಿಕೊಸ್ಟಾ ಮಾತನಾಡಿ, ‘ಆನ್‌ಲೈನ್‌ನಲ್ಲಿ ನಮಗೆ ಪಾಠ ನಮಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಹೆಚ್ಚಿನ ಸಮಯವನ್ನು ಆಟದಲ್ಲೇ ಕಳೆದಿದ್ದೆವು. ಈಗ ಶಾಲೆ ಆರಂಭವಾಗಿರುವುದರಿಂದ ಸಂತೋಷವಾಗಿದೆ. ಶಾಲೆಯಲ್ಲಿ ಶಿಕ್ಷಕರ ಎದುರು ಪಾಠ ಕೇಳುವುದರಿಂದ ಹೆಚ್ಚು ಅರ್ಥವಾಗುತ್ತದೆ’ ಎಂದು ಹೇಳಿದನು.

‘ಆನ್‌ಲೈನ್‌ನಲ್ಲಿ ಪಾಠ ಕೇಳುವುದಕ್ಕಿಂತ ಆಟ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲೇ ಕಾಲ ಕಳೆಯುತ್ತಿದ್ದರು. ಪಾಠದ ವಿಷಯದಲ್ಲಿ ಪೋಷಕರ ಮಾತಿಗಿಂತ ಶಿಕ್ಷಕರ ಮಾತನ್ನು ಕೇಳುತ್ತಾರೆ’ ಎಂಬುದು ಪೋಷಕ ಸದಾಶಿವ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.