ADVERTISEMENT

ಜಗಳೂರು: ಚಿಕ್ಕಪ್ಪನಿಂದಲೇ ಬಾಲಕಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 2:17 IST
Last Updated 5 ಅಕ್ಟೋಬರ್ 2020, 2:17 IST

ಜಗಳೂರು: ತಾಲ್ಲೂಕಿನ ಗ್ರಾಮ ವೊಂದರಲ್ಲಿ ಬಾಲಕಿಯನ್ನು ಜಮೀನಿಗೆ ಕರೆದುಕೊಂಡು ಹೋದ 17 ವರ್ಷದ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ.

ಒಂಬತ್ತು ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಶನಿವಾರ ಅತ್ಯಾಚಾರವೆಸಗಿಸಿದ್ದು, ಬಾಲಕಿ ಭಾನುವಾರ ಪೋಷಕರಿಗೆ ಈ ಸಂಗತಿ ತಿಳಿಸಿದ್ದಾಳೆ.
ಅತ್ಯಾಚಾರ ಎಸಗಿದ ಬಾಲಕ ಸಂಬಂಧದಲ್ಲಿಬಾಲಕಿಯ ಚಿಕ್ಕಪ್ಪ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬಾಲಕನನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ. ಜಗಳೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.