ADVERTISEMENT

ಹಳ್ಳಿಗಳ ಅಭಿವೃದ್ಧಿಯೇ ವಿಬಿ ಜಿ ರಾಮ್ ಜಿ ಉದ್ದೇಶ: ಬಸವರಾಜನಾಯ್ಕ

ಮಾಜಿ ಶಾಸಕ ಎಂ. ಬಸವರಾಜನಾಯ್ಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:30 IST
Last Updated 3 ಫೆಬ್ರುವರಿ 2026, 2:30 IST
ಮಾಯಕೊಂಡ ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಮಂಡಲ ಅಧ್ಯಕ್ಷ ಬಿ‌.ಜಿ. ಸಚಿನ್, ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಮಲ್ಲಿಕಾರ್ಜುನ್ ಇದ್ದರು.
ಮಾಯಕೊಂಡ ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಮಂಡಲ ಅಧ್ಯಕ್ಷ ಬಿ‌.ಜಿ. ಸಚಿನ್, ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಮಲ್ಲಿಕಾರ್ಜುನ್ ಇದ್ದರು.   

ಮಾಯಕೊಂಡ: ‘ವಿಬಿ ಜಿ ರಾಮ್ ಜಿ ವಿಕಸಿತ ಭಾರತದ ಮೂಲಕ ಹಳ್ಳಿಗಳ ಅಭಿವೃದ್ಧಿ ಯೋಜನೆಯಾಗಿದೆ. ಇದರಲ್ಲಿ ರಸ್ತೆ, ಚೆಕ್ ಡ್ಯಾಂ, ಬ್ರಿಡ್ಜ್‌‌ಗಳಂತ ಶಾಶ್ವತ ಆಸ್ತಿ ನಿರ್ಮಾಣ ಮಾಡಲಾಗುತ್ತದೆ’ ಎಂದು ಮಾಜಿ ಶಾಸಕ ಎಂ. ಬಸವರಾಜನಾಯ್ಕ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಡೆ ಗಮನಹರಿಸದೆ ಅಪಪ್ರಚಾರ ನಡೆಸುತ್ತಿದೆ. ಕೂಲಿಗಾಗಿ ಕಾಳು ಯೋಜನೆಯಿಂದ ಆರಂಭವಾಗಿ, ನರೇಗಾ ಮಾಡಲಾಗಿತ್ತು. ಅಂದು ಮಹಾತ್ಮ ಗಾಂಧಿ ಹೆಸರು ಇರಲಿಲ್ಲ. ನಂತರ ಮನರೇಗಾ ಮಾಡಿ ಗಾಂಧೀಜಿ‌ ಹೆಸರು ಸೇರಿಸಲಾಗಿದೆ. ಬಡವರಿಗೆ ಅನುಕೂಲ ಆಗಬೇಕಿದ್ದ ಮನರೇಗಾದಲ್ಲಿ 10 ಜನ ಕೆಲಸ ಮಾಡಿ, 50 ಜನರ ಹಾಜರಾತಿ ಮೂಲಕ ಅವ್ಯವಹಾರ ನಡೆಯುತ್ತಿತ್ತು. ಅದನ್ನ ತಪ್ಪಿಸಲು ವಿಬಿಜಿ ರಾಮ್ ಜಿ ಜಾರಿಗೆ ತರಲಾಗಿದೆ’ ಎಂದು ಹೇಳಿದರು.

‘ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಪರಾಜಿತ ಅಜಯ್ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಮನವರಿಕೆ ಮಾಡಿದ್ದೇವೆ. ಆದರೆ, ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದರು.

ADVERTISEMENT

ಮಾಯಕೊಂಡಲ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿ, ನರೇಗಾದಲ್ಲಿ ಆಗುತ್ತಿದ್ದ ಸೋರಿಕೆ ತಡೆಯಲು ನರೇಂದ್ರ ಮೋದಿಯವರು ಬಿವಿ ಜಿ ರಾಮ್ ಜಿ ಜಾರಿಗೆ ತರಲಾಗಿದೆ. ಇದರಲ್ಲಿ ಜಿಪಿಎಸ್, ಹಾಗೂ ಕೂಲಿಕಾರರ ಮುಖ ಗುರುತಿಸುವಿಕೆ ಇದೆ’ ಎಂದರು.

‘ಮಾಯಕೊಂಡ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಪರ್ಸೆಂಟೇಜ್ ಹೆಚ್ಚಾಗಿದೆ. ಶಾಸಕರಿಗೆ ಶೇ 15, ಮಂತ್ರಿಗಳಿಗೆ ಶೇ 12,  ಜಿಎಸ್‌ಟಿ ಶೇ 18, ಡೆವಲಪ್‌ಮೆಂಟ್ ಶೇ 4, ಲೇಬರ್ ಸೆಸ್ ಶೇ 1, ಅಧಿಕಾರಿಗಳು ಶೇ 18 ಕಮಿಷನ್ ಹೋಗುತ್ತಿದ್ದು ಅಭಿವೃದ್ಧಿ ಇಲ್ಲದಾಗಿದೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ’ ಎಂದು ಸಚಿನ್ ದೂರಿದರು.

ಬಿಜೆಪಿ ಮಾಯಕೊಂಡ ಮಂಡಲ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಸಂಡೂರ್ ರಾಜಶೇಖರ್, ಎಂ.ಜಿ. ಗುರುನಾಥ್ ಅಶೋಕ ಪೂಜಾರ್, ಪರಕಿ ಮಹಾಂತೇಶ್, ದ್ವಾರಕೀಶ್, ನಾಗರಾಜ್, ಮುರುಗೇಶ್, ಶಶಿಧರ್, ಕಲ್ಲೇಶ್, ಸೈಟ್ ಜಯಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.