ಕಡರನಾಯ್ಕನಹಳ್ಳಿ: ಸಮೀಪದ ಯಲವಟ್ಟಿ ಗ್ರಾಮದಲ್ಲಿ ಮಾರ್ಚ್ 23ರಂದು ನಡೆಯುವ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಶನಿವಾರ ನಡೆದ ರಂಗೋಲಿ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ರಥ ಬೀದಿಯುದ್ದಕ್ಕೂ ಗ್ರಾಮದ ಮಹಿಳೆಯರು ರಂಗುರಂಗಿನ ರಂಗೋಲಿಯ ಚಿತ್ತಾರ ಬಿಡಿಸಿದ್ದರು. ಒಂದಕ್ಕಿಂತ ಒಂದು ರಂಗೋಲಿಗಳು ಆಕರ್ಷಕವಾಗಿದ್ದವು.
ಪ್ರಥಮ ಬಹುಮಾನ ₹1,501, ದ್ವಿತೀಯ ಬಹುಮಾನ ₹1,001, ತೃತೀಯ ಬಹುಮಾನ ₹501 ಹಾಗೂ ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ನಿವೃತ್ತ ಸುಬೇದಾರ್ ಶಿವಕುಮಾರ್, ಪತ್ರಕರ್ತ ಜಿಗಳಿ ಪ್ರಕಾಶ್, ಡಿ.ರಾಜಪ್ಪ, ಪೂಜಾರ ಬಸವರಾಜ್, ಬಿ.ಮಲ್ಲೇಶ್, ಬಿ. ರಮೇಶ್ ಇದ್ದರು.
ಇಂದು ರಥೋತ್ಸವ: ಭಾನುವಾರ ಬೆಳಿಗ್ಗೆ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಸಂಜೆ 5 ಗಂಟೆಗೆ ಸ್ವಾಮಿಯ ಮುಳ್ಳುಗದ್ದಿಗೆ, ಸಂಜೆ 5.30ಕ್ಕೆ ಓಕುಳಿ ನಂತರ ಭೂತನ ಸೇವೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.