
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಶುಲ್ಕ ವಸೂಲಿ ಕಾರ್ಯಾಚರಣೆಯನ್ನು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ಖಾಸಗಿ ಸಂಸ್ಥೆಗೆ ವಹಿಸಿದೆ.
‘ಇವರೆಗೆ ಪ್ರಾಧಿಕಾರವೇ ಸಿಬ್ಬಂದಿ ಮೂಲಕ ನೇರವಾಗಿ ಶುಲ್ಕ ಸಂಗ್ರಹಣೆ ಮಾಡುತ್ತಿತ್ತು. ಇದೀಗ ಟೆಂಡರ್ ಮೂಲಕ ಓಂ ಸಾಯಿ ಸಿದ್ಧಿ ಸಂಸ್ಥೆಗೆ ವಹಿಸಲಾಗಿದೆ’ ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಾರ್ಕಿಂಗ್ ಶುಲ್ಕ ವಿವರ: 30 ನಿಮಿಷಗಳವರೆಗೆ – ಕಾರುಗಳಿಗೆ ₹30, ದ್ವಿಚಕ್ರ ವಾಹನಗಳಿಗೆ ₹10, ಪ್ರಾಧಿಕಾರದ ಪರವಾನಗಿ ಹೊಂದಿರದ ವ್ಯಾಪಾರಿ ವಾಹನಗಳಿಗೆ ₹42 ಹಾಗೂ ಪರವಾನಗಿ ಹೊಂದಿದ್ದರೆ ₹20, ಟೆಂಪೊ/ಎಸ್‌ಯುವಿ/ಮಿನಿ ಬಸ್‌ಗಳಿಗೆ ₹60 ಮತ್ತು ಬಸ್/ಕೋಚ್/ಟ್ರಕ್‌ಗಳಿಗೆ ₹170 ನಿಗದಿಪಡಿಸಲಾಗಿದೆ.
30 ನಿಮಿಷಗಳಿಂದ 2 ತಾಸುಗಳ ಅವಧಿಗೆ ಕಾರುಗಳಿಗೆ ₹40, ದ್ವಿಚಕ್ರ ವಾಹನಗಳಿಗೆ ₹15, ಪ್ರಾಧಿಕಾರದ ಪರವಾನಗಿ ಹೊಂದಿರದ ವ್ಯಾಪಾರಿ ವಾಹನಗಳಿಗೆ ₹92 ಹಾಗೂ ಪರವಾನಗಿ ಹೊಂದಿದ್ದರೆ ₹35, ಟೆಂಪೊ/ಎಸ್‌ಯುವಿ/ಮಿನಿ ಬಸ್‌ಗಳಿಗೆ ₹80 ಮತ್ತು ಬಸ್/ಕೋಚ್/ಟ್ರಕ್‌ಗಳಿಗೆಕ್ ₹250 ನಿಗದಿಪಡಿಸಲಾಗಿದೆ.
2 ತಾಸು ದಾಟಿದ ಬಳಿಕ 7 ತಾಸುಗಳ ವರೆಗೆ ಪ್ರತಿ ಗಂಟೆಗೆ ದ್ವಿಚಕ್ರ ವಾಹನಗಳಿಗೆ ₹5 ಮತ್ತು ನಾಲ್ಕು ಚಕ್ರ ವಾಹನಗಳಿಗೆ ₹10 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. 7 ತಾಸುಗಳ ಬಳಿಕ 24 ಗಂಟೆಗಳವರೆಗೆ ನಿಲುಗಡೆ ಮಾಡಿದಲ್ಲಿ, 2 ತಾಸುಗಳಿಗೆ ಇದ್ದ ಶುಲ್ಕದ ಮೂರು ಪಟ್ಟು ಅನ್ವಯಿಸುತ್ತದೆ.
ಉಚಿತ: ಖಾಸಗಿ ವಾಹನಗಳಿಗೆ ನಿಲ್ದಾಣ ಪ್ರವೇಶ ಮಾರ್ಗದಲ್ಲಿನ ಪಿಕ್–ಅಪ್, ಡ್ರಾಪ್ ಲೇನ್‌ನಲ್ಲಿ 8 ನಿಮಿಷ ಹಾಗೂ ಪಾರ್ಕಿಂಗ್ ಪ್ರದೇಶದ ಒಳಗೆ ಪಿಕ್-ಅಪ್/ಡ್ರಾಪ್‌ಗೆ 2 ನಿಮಿಷ ಉಚಿತ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಈ ಅವಧಿ ಮೀರಿದಲ್ಲಿ ವಾಹನಗಳ ವಿಧಗಳಿಗೆ ಅನುಗುಣವಾಗಿ ₹10ರಿಂದ ₹213ರ ವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರಾಧಿಕಾರದ ಪರವಾನಗಿ ಪಡೆದ ವಾಹನಗಳಿಗೆ ಹೆಚ್ಚುವರಿ ಶುಲ್ಕ ಅನ್ವಯಿಸುವುದಿಲ್ಲ.
ಪ್ರವೇಶ ಟೋಕನ್ ಕಡ್ಡಾಯ: ಪ್ರತಿ ವಾಹನಕ್ಕೂ ಪಾರ್ಕಿಂಗ್ ಪ್ರವೇಶದ ಬಳಿ ಪ್ರವೇಶ ಟೋಕನ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಟೋಕನ್ ಕಳೆದುಕೊಂಡಲ್ಲಿ ₹300 ದಂಡ ವಿಧಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.