ADVERTISEMENT

‘ಅಕ್ಷರ ಸಂಗಾತ’ ಕಥಾ ಸ್ಪರ್ಧೆ ಬಹುಮಾನ ಪ್ರಕಟ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 20:51 IST
Last Updated 26 ಅಕ್ಟೋಬರ್ 2021, 20:51 IST
ಸುವರ್ಣಾ ಚೆಳ್ಳೂರ
ಸುವರ್ಣಾ ಚೆಳ್ಳೂರ   

ಧಾರವಾಡ: ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ‘ಯುವ ಕಥಾ ಸ್ಪರ್ಧೆ’ಯಲ್ಲಿ ಕಥಾ ಬಹುಮಾನವನ್ನು ಇಬ್ಬರು ಸಮನಾಗಿ ಹಂಚಿಕೊಂಡಿದ್ದು, ಕೊಪ್ಪಳ ಜಿಲ್ಲೆ ಕಾರಟಗಿಯ ಸುವರ್ಣ ಚೆಳ್ಳೂರು ಅವರ ‘ಕಂಬದ ಹಕ್ಕಿ’ ಮತ್ತು ಬೆಂಗಳೂರಿನ ಜಿ. ಪ್ರವೀಣ ಕುಮಾರ್ ಅವರ ‘ಗುಟ್ಟು’ ಪಡೆದುಕೊಂಡಿವೆ.

ರಾಯಚೂರು ಜಿಲ್ಲೆ ಸಿಂಧನೂರಿನ ನಾಗರಾಜ ಕೋರಿ ಅವರ ‘ಮಲ್ಲಯ್ಯನ ಮೈಕು’, ದಕ್ಷಿಣ ಕನ್ನಡದ ಬೆಳ್ತಂಗಡಿಯ ಝಬೈರ್ ಅಹ್ಮದ್ ಪರಪ್ಪು ಅವರ ‘ಒಂದು ತಿರುವಿನ ಕರಾಮತ್ತು’ ಒಪ್ಪಿತ ಕತೆಗಳಾಗಿ ಆಯ್ಕೆಯಾಗಿವೆ.

ನಾಲ್ಕೂ ಕಥೆಗಳಿಗೂ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಕಥೆಗಳು ‘ಅಕ್ಷರ ಸಂಗಾತ’ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ.

ADVERTISEMENT

‘2022ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಪತ್ರಿಕೆಯ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹಿರಿಯ ಕಥೆಗಾರರಾದ ಬಾನು ಮುಷ್ತಾಕ್ ಹಾಗೂ ಜಿ.ವಿ.ಆನಂದಮೂರ್ತಿ ತೀರ್ಪುಗಾರರಾಗಿದ್ದರು’ ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.