ADVERTISEMENT

ಕರ್ನಾಟಕ ಏಕೀಕರಣಕ್ಕೆ ಆಲೂರರ ಕೊಡುಗೆ ಅಪಾರ: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:12 IST
Last Updated 27 ಫೆಬ್ರುವರಿ 2026, 8:12 IST
ಧಾರವಾಡದಲ್ಲಿ ಏರ್ಪಡಿಸಿದ್ದ ಸ್ಮರಣೋತ್ಸವದಲ್ಲಿ ಆಲೂರು ವೆಂಕಟರಾವ್ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ನಮನ ಸಲ್ಲಿಸಿದರು 
ಧಾರವಾಡದಲ್ಲಿ ಏರ್ಪಡಿಸಿದ್ದ ಸ್ಮರಣೋತ್ಸವದಲ್ಲಿ ಆಲೂರು ವೆಂಕಟರಾವ್ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ನಮನ ಸಲ್ಲಿಸಿದರು    

ಧಾರವಾಡ: ಕರ್ನಾಟಕ ಏಕೀಕರಣಕ್ಕೆ ಆಲೂರು ವೆಂಕಟರಾವ್ ಅವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಹೇಳಿದರು.

ಆಲೂರು ವೆಂಕಟರಾವ್ ಟ್ರಸ್ಟ್ ವತಿಯಿಂದ ಆಲೂರು ವೆಂಕಟರಾವ್ ಭವನದಲ್ಲಿ ಈಚೆಗೆ ನಡೆದ ಆಲೂರು ವೆಂಕಟರಾವ್ ಅವರ `ಸ್ಮರಣೋತ್ಸವ', `ಕರ್ನಾಟಕತ್ವದ ಆಲೂರು ವೆಂಕಟರಾವ್' ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೆಂಕಟರಾವ್ ಅವರು ರಾಷ್ಟ್ರೀಯ ಜಾಗೃತಿಗಾಗಿ 1909ರಲ್ಲಿ ಧಾರವಾಡದಲ್ಲಿ ವಸತಿ ರಾಷ್ಟ್ರೀಯ ಶಾಲೆಯನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೆನ್ಸಿಲ್ ತಯಾರಿಕೆ, ಮುದ್ರಣ, ಹಂಚು ತಯಾರಿಕೆ, ಚಿತ್ರಕಲೆ, ಬಡಿಗತನ ವೃತ್ತಿ ತರಬೇತಿಯನ್ನು ಆರಂಭಿಸಿದರು ಎಂದರು.

ADVERTISEMENT

ಸಾಹಿತಿ ಬಾಳಣ್ಣ ಶೀ್ಗಿಹಳ್ಳಿ ಮಾತನಾಡಿ, ಸ್ವಾತಂತ್ರ್ಯ ಚಳವಳಿ ಹಾಗೂ ಏಕೀಕರಣ ಚಳವಳಿಗಳು ಒಂದೇ ಕಾಲ ಘಟ್ಟದಲ್ಲಿ ಪ್ರಾರಂಭಗೊಂಡಿರುವುದು ಕಾಕತಾಳೀಯ. ಆಲೂರು ಅವರು ಕನ್ನಡ ಭಾಷೆ, ಇತಿಹಾಸ ಹಾಗೂ ಸಂಸ್ಕೃತಿ ಕುರಿತು ಕಾಳಜಿ ವಹಿಸಿ, ಕನ್ನಡಿಗರಲ್ಲಿ ಕನ್ನಡದ ಭಾಷಾಭಿಮಾನ ಮತ್ತು ನಾಡ ಜಾಗೃತಿ ಮೂಡಿಸಿದರು ಎಂದರು.

ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಪ್ರೊ.ಐ.ಜಿ ಸನದಿ, ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ದ್ರೌಪದಿ ವಿಜಾಪುರ, ಸಿ.ಯು.ಬೆಳ್ಳಕ್ಕಿ ಬಸವರಾಜ ಸೂಳಿಭಾವಿ, ಸಾಹಿತಿ ಹ.ವೆಂ.ಕಾಖಂಡಿಕಿ, ಪ್ರೊ.ವೀರಣ್ಣ ರಾಜೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.