ADVERTISEMENT

ಕರ್ನಾಟಕ ವಿವಿಯಿಂದ ಚಂದ್ರಶೇಖರ ಕಂಬಾರ ಸೇರಿ ಮೂವರಿಗೆ ‘ಅರಿವೇ ಗುರು’ ಪ್ರಶಸ್ತಿ

ಪುರಸ್ಕಾರವು ತಲಾ ₹ 25 ಸಾವಿರ ನಗದು, ಫಲಕ ಒಳಗೊಂಡಿದೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 12:39 IST
Last Updated 28 ಜನವರಿ 2025, 12:39 IST
<div class="paragraphs"><p>ಪ್ರೊ..ಎನ್‌.ಎಂ.ಬುಜುರ್ಕೆ,&nbsp;ಚಂದ್ರಶೇಖರ ಕಂಬಾರ,&nbsp;ಪ್ರೊ.ವಿ.ಜಿ.ತಳವಾರ</p></div>

ಪ್ರೊ..ಎನ್‌.ಎಂ.ಬುಜುರ್ಕೆ, ಚಂದ್ರಶೇಖರ ಕಂಬಾರ, ಪ್ರೊ.ವಿ.ಜಿ.ತಳವಾರ

   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ನೀಡುವ ‘ಅರಿವೇ ಗುರು’ ಪ್ರಶಸ್ತಿಗೆ ಲಾ ಕ್ಷೇತ್ರದಿಂದ ಪ್ರೊ.ಚಂದ್ರಶೇಖರ ಕಂಬಾರ, ಸಮಾಜ ವಿಜ್ಞಾನ ಕ್ಷೇತ್ರದಿಂದ ಪ್ರೊ.ವಿ.ಜಿ.ತಳವಾರ ಹಾಗೂ ವಿಜ್ಞಾನ ಕ್ಷೇತ್ರದಿಂದ ಪ್ರೊ. ಪ್ರೊ.ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.

ಪುರಸ್ಕಾರವು ತಲಾ ₹ 25 ಸಾವಿರ ನಗದು, ಫಲಕ ಒಳಗೊಂಡಿದೆ.

ADVERTISEMENT

ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಜ.29ರಂದು ಬೆಳಿಗ್ಗೆ 11ಗಂಟೆಗೆ ಪ್ರಶಸ್ತಿ ಸಮಾರಂಭ ನಡೆಯಲಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ. ಪರಮಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.