
ನವಲಗುಂದ: ‘ವಿರೋಧ ಪಕ್ಷಗಳು ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ ಮುಖ್ಯಮಂತ್ರಿಯವರು, ಸಚಿವರು ಉತ್ತರ ನೀಡುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರ ಹೋರಾಟಕ್ಕೆ ನಮ್ಮ ಸಹಕಾರ ಇದೆ. ಮೆಕ್ಕಜೋಳ ಖರೀದಿಗೆ ಸಂಬಂಧಿಸಿದಂತೆ ಎಥನಾಲ್ ಘಟಕಗಳಿಗೆ, ಡಿಸ್ಟಿಲರಿಸ್‌ಗಳಿಗೆ ತಾಕೀತು ಮಾಡಲಾಗಿದೆ. ಪರ್ಯಾಯವಾಗಿ ಏನು ಮಾಡಬೇಕು ಎಂಬ ಕುರಿತು ಮುಖ್ಯಮಂತ್ರಿಯವರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.
‘ಪ್ರಧಾನಿ ಸಚಿವಾಲಯದ ಕಾರ್ಯದರ್ಶಿಗಳ ದುಬೈ ಮೂಲದ ‘ಮಾಧವ್’ ಆ್ಯಪ್ ವಿಚಾರದಲ್ಲಿ ಸಿಕ್ಕಿಬಿದ್ದಿದ್ಧಾರೆ, ಡಾಲರ್ ಬೆಲೆ ₹ 91ಕ್ಕೆ ಏರಿದೆ, ಒಂದು ತೊಲ ಚಿನ್ನದ ಬೆಲೆ ₹ 1.30 ಲಕ್ಷ ಆಗಿದೆ ಈ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಬೇಕು. ಬರೀ ಕಾಂಗ್ರೆಸ್ ಬಗ್ಗೆ ಮಾತನಾಡುವುದಲ್ಲ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.