ಸಾವು (ಪ್ರಾತಿನಿಧಿಕ ಚಿತ್ರ)
ಧಾರವಾಡ: ಇಲ್ಲಿನ ಸಂತೋಷನಗರದ ಮನೆಯೊಂದರಲ್ಲಿ ಕುಪ್ಪಡಿಗೆಗೆ (ಕೆಂಡದ ಕುಡಿಕೆ) ಥಿನ್ನರ್ ಕ್ಯಾನ್ ಉರುಳಿ ಬೆಂಕಿ ಹೊತ್ತಿಕೊಂಡಿದ್ದು, ಬಾಲಕ ಅಗಸ್ತ್ಯ (4) ಮೃತಪಟ್ಟ. ಬಾಲಕನ ತಂದೆ ಚಂದ್ರಕಾಂತ್ ಮಾಶಾಳ ಅವರಿಗೆ ಗಾಯವಾಗಿದೆ.
‘ಚಂದ್ರಕಾಂತ ಅವರು ಖಾಸಗಿ ಕಂಪನಿ ಉದ್ಯೋಗಿ. ಪತ್ನಿ ಸುಶ್ಮಿತಾ, ಮತ್ತೊಂದು ಮಗು ಇನ್ನೊಂದು ಕೊಠಡಿಯಲ್ಲಿ ಇದ್ದರು. ಅವಘಡದಲ್ಲಿ ಸುಶ್ಮಿತಾ ಅವರ ತಾಯಿ ಸುವರ್ಣಾ ಅವರಿಗೂ ಗಾಯಗಳಾದವು. ಬೆಂಕಿಯಿಂದ ಇತರೆ ವಸ್ತುಗಳು ಸುಟ್ಟಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.