ಧಾರವಾಡ: ಜಿಲ್ಲೆಯಲ್ಲಿ ಅಗಸ್ಟ್‌ನಲ್ಲಿ ಸತತ ಮಳೆಯಿಂದಾಗಿ ಸುಮಾರು 93 ಸಾವಿರ ಹೆಕ್ಟೇರ್ ಬೆಳೆ (ಕೃಷಿ ಮತ್ತು ತೋಟಗಾರಿಕೆ) ಹಾನಿಯಾಗಿದೆ. ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೋರಿದರು.
ಮುಖ್ಯಮಂತ್ರಿಯವರೊಂದಿಗೆ ನಡೆದ ಧಾರವಾಡ ಜಿಲ್ಲಾಡಳಿತದ ವಿಡಿಯೊ ಸಂವಾದದಲ್ಲಿ ಅವರು ಮಳೆ ಹಾನಿ ವಿವರ ನೀಡಿದರು. ಬೆಳೆಹಾನಿಗೆ ಸಂಬಂಧಿಸಿ ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳ ತಂಡಗಳು ಜಂಟಿ ಸಮೀಕ್ಷೆ ನಡೆಸಿವೆ. ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಮಳೆ ಹಾನಿ ಮಾಹಿತಿ, ಅಂಕಿಅಂಶ (ಮಳೆ ಪ್ರಮಾಣ, ಬೆಳೆ, ಮನೆ, ಜೀವ ಹಾನಿ) ತಿಳಿಸಿದರು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗಳ:ಪಿಡಿ ಖಾತೆಯಲ್ಲಿ ₹ 27.13 ಕೋಟಿ ಅನುದಾನ ಲಭ್ಯ ಇದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.