ಅಳ್ನಾವರ: ‘ಆಧುನಿಕ ಪ್ರಪಂಚದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆ ನಡೆಯುತ್ತಿರುತ್ತದೆ. ಇದನ್ನು ಅರಿತು ಹಾಗೂ ಹೊಸ ಯುವ ಸದಸ್ಯರನ್ನು ನೇಮಿಸಿಕೊಂಡು ಅವರ ವಿನೂತನ ವಿಚಾರಧಾರೆಗಳನ್ನು ಅಳವಡಿಕೊಳ್ಳುವ ಮೂಲಕ ಸಮಾಜಕ್ಕೆ ಬೇಕಾದ ಕಾರ್ಯಕ್ರಮ ರೂಪಿಸಬೇಕು‘ ಎಂದು ಜಿಲ್ಲಾ ಗವರ್ನರ್ ಜೊಶೆ ಫ್ರಾನ್ಸಿಸ್ಕೊ ಎರ್ಲೆ ಸಲಹೆ ನೀಡಿದರು.
ಗುರುವಾರ ಸಂಜೆ ಇಲ್ಲಿನ ಲಯನ್ಸ್ ಕ್ಲಬ್‌ಗೆ ಭೇಟಿ ನೀಡಿ, ಸಂಘದ ಕಾರ್ಯ ಚಟುವಟಿಕೆ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಅಂತರರಾಷ್ಟ್ರೀಯ ಲಯನ್ಸ್ ಕ್ಲಬ್‌ನ ಸದಸ್ಯತ್ವ ಹೊಂದುವುದು ಘನತೆಯ ಸಂಕೇತ. ಹೊಸ ಸದಸ್ಯರನ್ನು ಸೇಳೆಯಬೇಕು ಎಂದರು.
ಹಿರಿಯ ಸದಸ್ಯ ಎಸ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕ್ಲಬ್ ತನ್ನದೆ ಆದ ಸ್ವಂತ ನಿವೇಶನ ಹೊಂದಿದೆ. ಇಲ್ಲಿ ಹೆಲ್ತ್ ಕೇರ್ ಸೆಂಟರ್ ತೆರೆಯುವ ಚಿಂತನೆ ಇದೆ. ಗ್ರಾಮಾಂತರ ಭಾಗದ ಕ್ಲಬ್‌ಗಳ ಉನ್ನತಿಗೆ ಜಿಲ್ಲಾ ಕ್ಲಬ್ ವತಿಯಿಂದ ಆರ್ಥಿಕ ಸಹಾಯ ನೀಡಬೇಕು‘ ಎಂದರು.
ಸದಸ್ಯರಿಗೆ ವಿಶೇಷ ಪಿನ್ ನೀಡಿ ಗೌರವಿಸಲಾಯಿತು. ಜಾಗತಿಕ ಶಾಂತಿಗಾಗಿ ಮೌನ ಆಚರಿಸಲಾಯಿತು. ಅಶೋಕ ಕುಂಟನ್ನವರ ದ್ವಜವಂದನೆ ನಡೆಸಿಕೊಟ್ಟರು. ಕಾರ್ಯದರ್ಶಿ ರವಿ ಪಟ್ಟಣ ವಾರ್ಷಿಕ ವರದಿ ಓದಿದರು. ಶೀತಲ್ ಬೆಟದೂರ ಅತಿಥಿಗಳನ್ನು ಪರಿಚಯಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗಿರಿಧರ ದೇಸಾಯಿ, ಅರುಣ ಜೋತವಾರ, ಅಶ್ವಿನ ಕಾರ್ಪೆ, ಶೈಲಾ ಕರಗುಂಡಿ, ಅನಿರುದ್ದ ಕುಲಕರ್ಣಿ, ಯುಹಾನ್ ಸಿಂಗೆನಮು, ಆರ್.ಎಸ್. ಬಿಜಾಪೂರ, ಅಶೋಕ ಟೆಂಕನ್ನವರ, ಮಂಜುನಾಥ ಬಾಳೆಕುಂದ್ರಿ, ಪ್ರಶಾಂತ ಸೋನಾರ, ಸಚಿನ ಹಟ್ಟಿಹೊಳಿ, ರಾಜಶೇಖರ ಹಿರೇಮಠ, ಪ್ರೇಮ ಜಿತೂರಿ, ಅಮೃತ ಪಟೇಲ, ಮಂಜುನಾಥ ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.