ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದ ಯಂತ್ರೋಪಕರಣ ಮಳಿಗೆ ಆವರಣ ಕೆಸರುಮಯವಾಗಿತ್ತು
ಧಾರವಾಡ: ಕೃಷಿ ಮೇಳದ ಕೆಲ ಮಳಿಗೆ ಆವರಣದಲ್ಲಿ ಕೆಸರಿನಿಂದಾಗಿ ಜನರು ಓಡಾಡಲು ತೊಂದರೆಯಾಯಿತು.
ಶುಕ್ರವಾರ ರಾತ್ರಿ ಮತ್ತು ಶನಿವಾರ ನಸುಕಿನಲ್ಲಿ ಮಳೆಯಾಗಿದ್ದರಿಂದ ಮೇಳದ ಮಳಿಗೆಗಳ ಮುಂಭಾಗದಲ್ಲಿ ಕೆಸರಾಗಿತ್ತು. ಕೆಸರಿನಲ್ಲೇ ವರ್ತಕರು ವಹಿವಾಟು ನಡೆಸಿದರು. ಕೆಲವರು ಜಲ್ಲಿ ಹಾಕಿ ಓಡಾಡಲು ವ್ಯವಸ್ಥೆ ಮಾಡಿದ್ದರು.
ಮಳಿಗೆಗಳಿಗೆ ಜರ್ಮನ್ ಟೆಂಟ್ ವ್ಯವಸ್ಥೆ ಇದ್ದಿದ್ದರಿಂದ ಒಳಭಾಗ ಚೆನ್ನಾಗಿತ್ತು. ಕೆಲವೆಡೆ ಹಾಕಿದ್ದ ಕಾರ್ಪೆಟ್‌ಗಳು ಒದ್ದೆಯಾಗಿದ್ದವು. ಪಾದರಕ್ಷೆಗಳು, ಬಟ್ಟೆಗಳಿಗೆ ಕೆಸರು ಅಂಟಿಕೊಂಡು ಓಡಾಡಲು ಪಡಿಪಾಟಲಾಯಿತು.
ಬಹಳಷ್ಟು ಜನ ಭೇಟಿ:
ಮೊದಲ ದಿನ ಮೇಳಕ್ಕೆ ಬಹಳಷ್ಟು ಜನ ಭೇಟಿ ನೀಡಿದ್ದರು. ಮಳಿಗೆಗಳಲ್ಲಿ ಜನ ಜಂಗುಳಿ ಹೆಚ್ಚು ಇತ್ತು. ಬೀಜ ಘಟಕ, ಮಳಿಗೆಗಳಲ್ಲಿ ಸಂದಣಿ ಹೆಚ್ಚು ಇತ್ತು. ಪ್ರದರ್ಶನ ಮಳಿಗೆಗಳಲ್ಲಿ ವಸ್ತುಗಳು, ಬೆಳೆಗಳನ್ನು ಕುತೂಹಲದಿಂದ ಜನರು ವೀಕ್ಷಿಸಿದರು. ಮಾಹಿತಿ ಪಡೆದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಜನ ಮೊದಲ ದಿನ ಹೆಚ್ಚು ಜನ ಭೇಟಿ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಕೃಷಿ ವಿ.ವಿ ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ನೀಡಿದವರ ನೋಂದಣಿ ಪ‍್ರಕ್ರಿಯೆಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.