ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಆವರಣದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 15ರಂದು ತುರ್ತು ಕಾಮಗಾರಿ ನಡೆಯಲಿದ್ದು, ಕೇಂದ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ಬಾರಾಕೊಟ್ರಿ, ಡಿ.ಸಿ ಕಾಂಪೌಂಡ್, ನಿರ್ಮಲ ನಗರ, ಮಹಾಮನೆ ಬಡಾವಣೆ, ಮಿಚಿಗನ್ ಲೇಔಟ್, ಕೇಶವ ನಗರ, ಬಸವರಾಜ ಪ್ಲಾಟ್, ರಾಘವೇಂದ್ರ ಕಾಲೊನಿ, ಸದಾಶಿವ ನಗರ, ಯುಬಿ ಹಿಲ್, ಕೆಸಿಡಿ ಕಾಲೇಜು, ಜುಬಿಲಿ ವೃತ್ತ, ಸಪ್ತಾಪೂರ ಬಾವಿ, ವೆಂಕಟೇಶ್ವರ ಕಾಲೊನಿ, ಭಾರತಿ ನಗರ, ನಾಡಿಗೇರ ಕಾಂಪೌಂಡ್, ರಾಣಿ ಚನ್ನಮ್ಮ ನಗರ, ಮಹಾಂತ ನಗರ, ಸಿದ್ದರಾಮೇಶ್ವರ ಕಾಲೊನಿ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.