ADVERTISEMENT

ಹುಬ್ಬಳ್ಳಿ: ನೇತ್ರ ದಾನ ಮಾಡಿ, ಬಾಳು ಬೆಳಗಿ- ನರರೋಗ ತಜ್ಞ ಡಾ.ಕ್ರಾಂತಿಕಿರಣ

ದುರ್ಗದ ಬೈಲ್ ವೃತ್ತದಲ್ಲಿ ನೇತ್ರದಾನ ಶಿಬಿರ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 5:02 IST
Last Updated 28 ನವೆಂಬರ್ 2021, 5:02 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ ದುರ್ಗದ ಬೈಲ್‌ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಾನಿಗಳು ನೇತ್ರದಾನ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ ದುರ್ಗದ ಬೈಲ್‌ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಾನಿಗಳು ನೇತ್ರದಾನ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು   

ಹುಬ್ಬಳ್ಳಿ: ‘ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾಗಿದ್ದು, ಅದನ್ನು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗುವಂತಾಗಬೇಕು. ನೇತ್ರದಾನ ಜನಾಂದೋಲನ ಸ್ವರೂಪ ಪಡೆಯಬೇಕು’ ಎಂದು ನರರೋಗ ತಜ್ಞ ಡಾ.ಕ್ರಾಂತಿಕಿರಣ ಹೇಳಿದರು.

ಇಲ್ಲಿನ ದುರ್ಗದ ಬೈಲ್‌ ವೃತ್ತದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ ಡಾ.ಎಂ.ಎಂ.ಜೋಶಿ ನೇತ್ರ ಆಸ್ಪತ್ರೆಯ ಅಂಗ ಸಂಸ್ಥೆ ಎಸ್.ಜೆ.ಎಂ.ನೇತ್ರ ಭಂಡಾರ ವತಿಯಿಂದ ಏರ್ಪಡಿಸಿದ್ದ ನೇತ್ರದಾನ ಶಿಬಿರದಲ್ಲಿ ಅವರು ಮಾತನಾಡಿದರು.

‘ಕಣ್ಣುಗಳ ಆರೈಕೆಯಷ್ಟೇ ಅವುಗಳ ರಕ್ಷಣೆಯೂ ಮುಖ್ಯ. ಕಣ್ಣು ಇದ್ದವರು ಮಾತ್ರ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕರು ನೇತ್ರದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಅದಕ್ಕೂ ಮುನ್ನ ಚಿಟಗುಪ್ಪಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ನೀಡಲಾಯಿತು. ಸಂಜೆ ದುರ್ಗದ ಬೈಲ್‌ ವೃತ್ತದಲ್ಲಿ ನಡೆದ ಪುನೀತ್‌ ರಾಜ್‌ಕುಮಾರ್‌ ನೆನಪು ಕಾರ್ಯಕ್ರಮದಲ್ಲಿ ರಾಜ ಗುರು ಮೆಲೋಡಿ ಗಾನ ಕಲಾ ತಂಡದಿಂದ ಮಧುರ ಮಧುರವಿ ಮಂಜುಳಗಾನ ಸಂಗೀತ ಸಂಜೆ ನಡೆಯಿತು.

ಮುಖಂಡರಾದ ವೀರಭದ್ರಪ್ಪ ಹಾಲರವಿ, ಪ್ರಭು ನವಲಗುಂದಮಠ, ರವಿ ಅಪ್ಪಾಜಿ, ಗೋವಿಂದ ಜೋಶಿ, ಶಿವಾನಂದ ಮುತ್ತಣ್ಣವರ, ರಾಧಾಬಾಯಿ ಸಫಾರೆ, ರಂಗಾಬದ್ದಿ, ಅಶೋಕ ಕಾಟವೆ, ಚಂದ್ರಶೇಖರ ಬೆಳವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.