
ಕುಂದಗೋಳ: ತಾಲ್ಲೂಕಿನಲ್ಲಿ ಕಡಲೆ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸಬೇಕು ಎಂದು ತಾಲ್ಲೂಕು ಬೆಳೆರಕ್ಷಕ ರೈತರ ಅಭಿವೃದ್ಧಿ ಸೇವಾ ಸಹಕಾರಿ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ರೈತ ಸಂಘದ ಅಧ್ಯಕ್ಷ ಸೋಮರಾವ ದೇಸಾಯಿ ಮಾತನಾಡಿ, ಈಗಾಗಲೆ ಈ ಕುರಿತು ಸಂಸದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಎಂ.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ನಾಗರಾಜ ದೇಶಪಾಂಡೆ, ಪರುಶುರಾಮ ಕಲಾಲ, ಶಂಕರಗೌಡ ದೊಡ್ಡಮನಿ ರೈತರ ಸಂಕಷ್ಟಗಳ ಕುರಿತು ಮಾತನಾಡಿದರು.
ಮನವಿಯಲ್ಲಿ ಕಡಲೆ ಬೆಳೆಯನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಕೇಂದ್ರ ಆರಂಭಿಸಬೇಕು, ಖರೀದಿ ಸಮಯದಲ್ಲೇ ಬಯೋಮೆಟ್ರಿಕ್ ತೆಗೆದುಕೊಳ್ಳಬೇಕು. ಬಿಲ್ ಹಾಕುವ ವೇಳೆಯಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸುವುದರಿಂದ ರೈತರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಇದನ್ನು ಸರಿ ಪಡಿಸಬೇಕು, ಬ್ಯಾಂಕ ಸಾಲ ಪಡೆಯುವಾಗ ರೈತರಿಗೆ ಸಿವಿಲ್ ಸ್ಕೋರ ವಿನಾಯತಿ ನೀಡಬೇಕು, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು, ಕಡಲೆ ಬೆಳೆಗೆ ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಲ್ ಖರೀದಿ ಮಾಡಬೇಕು, 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವ ರೈತರಿಗೆ ಕನಿಷ್ಠ 50 ಕ್ವಿಂಟಲ್ ಖರೀದಿಸುವ ನಿಯಮ ಜಾರಿಗೊಳಿಸಿಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತರಾದ ಸಿದ್ದಪ್ಪ ಇಂಗಳಳ್ಳಿ, ಮಲ್ಲೇಶ ಅವಾರಿ, ಮಲ್ಲಪ್ಪ ತಡಸದ, ನಾಗರಾಜ ದೇಶಪಾಂಡೆ, ರುದ್ರಪ್ಪ ಕಿರೇಸೂರ, ಲಕ್ಷ್ಮಣ ರಂಗನಾಯ್ಕರ,ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಪರಮೇಶ ಕಿರೇಸೂರ,ಆಜ್ಜಪ್ಪ ಕೀರೆಸುರ, ರಾಮಪ್ಪ ಮುದೆಣ್ಣವರ, ಕಲ್ಲಪ್ಪ ಉಗರಗೋಳ,ರಾಯೇಸಾಬ ಕಳ್ಳಿಮನಿ, ಮಂಜು ಯಲಿಗಾರ, ದೇವಪ್ಪ ಇಚ್ಚಂಗಿ, ಬಸವರಾಜ ಬ್ಯಾಹಟ್ಟಿ,ಈಶ್ವರ ಬಡ್ನಿ,ಎನ್ ಎನ್ ಮುಗಳ್ಳಿ ಸೋಮಣ್ಣ ಕುಂಬಾರ ಮತ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.