ADVERTISEMENT

ಜಿ.ಎಸ್.ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭ ನಾಳೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 13:33 IST
Last Updated 6 ಮೇ 2025, 13:33 IST
ಜಿ.ಎಂ. ಹೆಗಡೆ
ಜಿ.ಎಂ. ಹೆಗಡೆ   

ಧಾರವಾಡ: ‘ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಜಿ.ಎಸ್.ಆಮೂರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನ ವತಿಯಿಂದ ಮೇ 8 ರಂದು ನಗರದಲ್ಲಿ ಜಿ.ಎಸ್.ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ಸಾಹಿತಿ ಜಿ.ಎಂ.ಹೆಗಡೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೃಜನಾ ರಂಗಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟನೆ ನೆರವೇರಿಸುವರು. ಸಾಹಿತಿ ರಾಘವೇಂದ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿ ಕೃಷ್ಣ ಕಟ್ಟಿ, ಶಶಿ ಆಮೂರ ಪಾಲ್ಗೊಳ್ಳುವರು’ ಎಂದರು.

‘ಸಾಹಿತ್ಯ ಪ್ರಕಾಶನದ ‘ಸಮಗ್ರ ಬೇಂದ್ರೆ ವಿಮರ್ಶೆ’ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮನು ಬಳಿಗಾರ ಹಾಗೂ ಮನೋಹರ ಗ್ರಂಥ ಮಾಲಾ ಪ್ರಕಾಶನದ ‘ಬೆಳಕಿನ ಬೆಳೆ’ ಪುಸ್ತಕವನ್ನು ಸಾಹಿತಿ ಜಯಂತ ಕಾಯ್ಕಿಣಿ ಅವರು 11 ಗಂಟೆಗೆ ಬಿಡುಗಡೆಗೊಳಿಸುವರು’ ಎಂದು ಹೇಳಿದರು.

ADVERTISEMENT

‘ಮಧ್ಯಾಹ್ನ 12.30ಕ್ಕೆ ಸಂವಾದ ನಡೆಯಲಿದೆ. ಗಣೇಶ ದೇವಿ ಹಾಗೂ ಮಂಜುನಾಥ ಹಿರೇಮಠ ಪಾಲ್ಗೊಳ್ಳುವರು. 1 ಗಂಟೆಗೆ ಜಿ.ಎಸ್. ‘ಆಮೂರ ಮತ್ತು ಕನ್ನಡ ಸಾಹಿತ್ಯ ವಿಮರ್ಶೆ‘ ಗೋಷ್ಠಿ ಜರುಗಲಿದೆ. ಗೀತಾ ವಸಂತ ಅವರು ‘ಬೇಂದ್ರೆ ಸಾಹಿತ್ಯಾನುಸಂಧಾನ’, ಶ್ರೀಧರ ಬಳಗಾರ ಅವರು ‘ಕನ್ನಡ ಕಥನ ವಿಮರ್ಶೆ’ ಹಾಗೂ ಶ್ಯಾಮಸುಂದರ ಬಿರಕುಂದಿ ಅವರು ‘ಕನ್ನಡ ಕಾದಂಬರಿ’ ವಿಮರ್ಶೆ ಕುರಿತು ಮಾತನಾಡುವರು’ ಎಂದರು.

‘ಮಧ್ಯಾಹ್ನ 3.30ಕ್ಕೆ ’ಜಿ.ಎಸ್‌.ಆಮೂರು ಬಾಂಧವ್ಯ’ ಗೋಷ್ಠಿ ನಡೆಯಲಿದೆ. ರವಿ ಆಮೂರ, ಹೃಷಿಕೇಶ ಆಮೂರ, ವಿಜಯಾ ಗುತ್ತಲ, ಲೋಹಿತ ನಾಯ್ಕರ, ಶೈಲಜಾ ಆಮೂರ ಸಹಿತ ಹಲವರು ಭಾಗವಹಿಸುವರು. ಸಂಜೆ 5 ಗಂಟೆಗೆ ಸಮಾರೋಪ ಸಂಮಾರಂಭ ಜರುಗಲಿದೆ. ಸಾಹಿತಿ ಜಯಂತ ಕಾಯ್ಕಿಣಿ ಸಮಾರೋಪ ಭಾಷಣ ಮಾಡುವರು’ ಎಂದು ತಿಳಿಸಿದರು.

ಶ್ರೀನಿವಾಸ ವಾಡಪ್ಪಿ, ಕಷ್ಣ ಕಟ್ಟಿ, ಹರ್ಷ ಡಂಬಳ, ಹ.ವೆಂ.ಕಾಖಂಡಕಿ, ಬಿ.ವಿ.ಕುಲಕರ್ಣಿ, ಸಮೀರ ಜೋಶಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.