ADVERTISEMENT

ಗೌನ್‌ ಧರಿಸದ ಮೇಯರ್‌: ಪ್ರತಿಭಟನೆ, ಅನಿರ್ದಿಷ್ಟ ಅವಧಿಗೆ ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 8:17 IST
Last Updated 30 ಸೆಪ್ಟೆಂಬರ್ 2022, 8:17 IST
   

ಹುಬ್ಬಳ್ಳಿ: ಗೌನ್ ಧರಿಸದಿದ್ದಕ್ಕೆ ವಿರೋಧ ಪಕ್ಷದವರು ತೀವ್ರ ಪ್ರತಿಭಟನೆ ತೋರಿದ್ದಕ್ಕೆ ಮೇಯರ್ ಈರೇಶ ಅಂಚಟಗೇರಿ ಅವರು ಸಾಮಾನ್ಯ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ಸಾಮಾನ್ಯ ಸಭೆ ಬೆಳಿಗ್ಗೆ 11.30 ಕ್ಕೆ ಆರಂಭವಾದಾಗ ಮೇಯರ್ ಅವರು ಗೌನ್ ಧರಿಸದೆ ಬಂದಿದ್ದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಗದ್ದಲ ಹೆಚ್ಚಾದಾಗ ಅರ್ಧ ಗಂಟೆ ಸಭೆ ಮುಂದೂಡಿದರು.

ADVERTISEMENT

ಪುನ: 12.30 ಕ್ಕೆ ಸಭೆ ಆರಂಭವಾದಾಗಲೂ ಈರೇಶ ಅವರು ಗೌನ್ ಧರಿಸದೇ ಬಂದರು. ಇದರಿಂದ ಕೆರಳಿದ ವಿರೋಧ ಪಕ್ಷದ ಸದಸ್ಯರು, ತೀವ್ರ ವಿರೋಧ ವ್ಯಕ್ತಪಡಿಸಿದರು.

ಗದ್ದಲ ಹೆಚ್ಚಾದಾಗ ಈರೇಶ ಅವರು ಸಾಮಾನ್ಯ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.