
ಸೈಬರ್ ವಂಚನೆ
ಹುಬ್ಬಳ್ಳಿ: ಆನ್‌ಲೈನ್ ಮಾರುಕಟ್ಟೆಯಲ್ಲಿ ಹಣಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಗರದ ಬಸವಪ್ರಭು ಪಟ್ಟಣಶೆಟ್ಟಿ ಅವರಿಗೆ ನಂಬಿಸಿದ ವ್ಯಕ್ತಿಯೊಬ್ಬ, ಅವರಿಂದ ₹24.73 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಬಸವಪ್ರಭು ಅವರಿಗೆ ಎಕ್ಸ್ ಖಾತೆಯಲ್ಲಿ ಪರಿಚಯವಾದ ವಂಚಕ, ಹಣ ಹೂಡಿಕೆ ಮಾಡುವುದರ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರ ಅವರ ಮೊಬೈಲ್ ಅನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿ ಲಿಂಕ್ ಕಳುಹಿಸಿದ್ದ. ಅದನ್ನು ಡೌನ್‌ಲೋಡ್ ಮಾಡಿಸಿ, ಹಣ ಹೂಡಿಕೆ ಮಾಡಲು ಹೇಳಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು: ಇಲ್ಲಿಯ ಹೊಸಗಬ್ಬೂರಿನ ಪಿ.ಬಿ. ರಸ್ತೆಯ ಅನಿಲ ಬದ್ದಿ ಅವರ ಮಾಲೀಕತ್ವದ ಮದ್ಯದಂಗಡಿಯ ತಗಡಿನ ಚಾವಣಿ ಮುರಿದು, ₹1.30 ಲಕ್ಷ ನಗದು ಕಳವು ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.