ADVERTISEMENT

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಂಗೀತ, ಭಕ್ತಿಗೀತೆಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:08 IST
Last Updated 15 ಫೆಬ್ರುವರಿ 2026, 5:08 IST
<div class="paragraphs"><p>ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಯುವ ಕಲಾವಿದರು ಸಾಮೂಹಿಕ ತಬಲಾ ವಾದನ ನುಡಿಸಿದರು</p></div>

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಯುವ ಕಲಾವಿದರು ಸಾಮೂಹಿಕ ತಬಲಾ ವಾದನ ನುಡಿಸಿದರು

   

ಹುಬ್ಬಳ್ಳಿ: ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. 

ನಿನಾದ ಆರ್ಟ್ ಆಂಡ್ ಕಲ್ಚರಲ್ ಅಕಾಡೆಮಿಯ ತಬಲಾ ವಿದ್ಯಾರ್ಥಿಗಳು ಗುರು ವೀರೇಶ್ ಅಕ್ಕಿ ನೇತೃತ್ವದಲ್ಲಿ ಸಾಮೂಹಿಕ ತಬಲಾ ವಾದನ ನುಡಿಸಿದರು. ಮೂವರು ಯುವ ಗಾಯಕಿಯರು ಸಂಗೀತ ಕಾರ್ಯಕ್ರಮ. ಸಂಜೆ ಧಾರವಾಡದ ಶ್ರೀಧರ ಕುಲಕರ್ಣಿ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 

ADVERTISEMENT

ಜಯದೇವಿ ಜಂಗಮಶೆಟ್ಟಿ ಗಾಯನ ಇಂದು: ಶಿವರಾತ್ರಿ ಜಾಗರಣೆ ದಿನ ಸಿದ್ಧಾರೂಢ ಮಠದಲ್ಲಿ ಫೆ.15ರಂದು ರಾತ್ರಿ 8 ಗಂಟೆಗೆ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರ ಗಾಯನ, ಉಸ್ತಾದ ಮಹಮದ್ ಶಫಿ ಖಾನ್ ಅವರ ಸಿತಾರ ವಾದನ, ಉಮೇಶ ಪಾಚಂಗೆ ಅವರ ಗೋಂಧಳಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಅನಗೋಳದ ರಾಮಲಿಂಗೇಶ್ವರ ನಾಟ್ಯ ಸಂಘದವರ ‘ಮನ್ನಿಜಗುಣ ಶಿವಯೋಗಿಗಳ’ ನಾಟಕ ಪ್ರದರ್ಶನ ನಡೆಯಲಿದೆ. 

ಗುರುದೇವ ಮಾದನ್ನವರ (ಸಂಗೀತ) ವಿದುಷಿ ನೇತ್ರಾವತಿ ಹಿರೇಮಠ (ಭರತನಾಟ್ಯ) ಹಾಗೂ ಹರ್ಲಾಪುರ ಜಾನಪದ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.