ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರು ಉತ್ತರ ಕರ್ನಾಟಕದ ಆರಾಧ್ಯ ದೈವ. ಸರ್ವಧರ್ಮಿಯ ಭಕ್ತರನ್ನು ಹೊಂದಿರುವ ಸಿದ್ಧಾರೂಢ ಮಠ ಜಾತ್ಯತೀತ ಮಠವೆಂದೇ ಪ್ರಸಿದ್ಧಿ. ಸ್ಥಳೀಯರು, ಅಕ್ಕಪಕ್ಕದ ಜಿಲ್ಲೆಯವರಷ್ಟೇ ಅಲ್ಲದೆ, ಹೊರ ರಾಜ್ಯಗಳಿಂದಲೂ ಮಠಕ್ಕೆ ಹೆಚ್ಚಿನ ಭಕ್ತರಿದ್ದಾರೆ. ಶಿವಾರಾಧನೆಯ ಹಬ್ಬವಾದ ಮಹಾ ಶಿವರಾತ್ರಿಯ ಮಾರನೇ ದಿನ, ಅಂದರೆ ಭಾನುವಾರ ಸ್ವಾಮೀಜಿಯ ಜಾತ್ರಾ ಮಹೋತ್ಸವದ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.