ಹುಬ್ಬಳ್ಳಿ: ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಆರಾಧನೆ ಜರುಗಿತು.
ತಾಲ್ಲೂಕು ಆಡಳಿತ: ಇಲ್ಲಿನ ತಾಲ್ಲೂಕು ಆಡಳಿತಸೌಧದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮಹಾವೀರ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಪೂಜೆ ಸಲ್ಲಿಸಲಾಯಿತು.
ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಕಲಗೌಡ ಪಾಟೀಲ, ಸಮಾಜದ ಮುಖಂಡರಾದ ರಾಜೇಂದ್ರ ಬೆಳಗಿ, ವಿಮಲ್ ತಾಳಿಕೋಟಿ ಹಾಜರಿದ್ದರು.
ಛೇಡಾ ಐ.ಟಿ.ಐ. ಕಾಲೇಜು: ಇಲ್ಲಿನ ರಾಜನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐ.ಟಿ.ಐ ಕಾಲೇಜಿನಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್.ಬಿ. ಸಾಬಣ್ಣವರ ಅವರು, ಮಹಾವೀರ ಸಾರಿದ ಸತ್ಯ, ಅಹಿಂಸೆ ಮತ್ತು ತ್ಯಾಗದ ಮಹತ್ವ ತಿಳಿಸಿದರು. ಪ್ರತಿಯೊಬ್ಬರೂ ಈ ತತ್ವ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ವಿಜಯಲಕ್ಷ್ಮಿ ಜೆ.ಎಂ., ಆರ್.ಎನ್. ಕೋಟಿ, ವಿ.ವಿ. ಮೇಲ್ಮುರಿ, ಆರ್.ಎನ್. ಅಪ್ಪಣ್ಣವರ, ಜಿ.ಎಂ. ಬಡಿಗೇರ, ಎಸ್.ಜೆ. ಹಿರೇಮಠ, ಜಾಕೋಬ್ ಡೋಕ್ಕಾ, ಸಿ.ಎಸ್. ಜೈನರ್, ವಿ.ಡಿ. ಧರಣೆಪ್ಪನವರ, ಎಸ್.ಆರ್. ನೀರಾವರಿ, ಎ.ಎಸ್. ನಾವಳ್ಳಿ, ತಿಪ್ಪಣ್ಣ ನರಗುಂದ ಇದ್ದರು.
ಮೆರವಣಿಗೆ: ದಿಗಂಬರ ಜೈನ ಸಮಾಜದಿಂದ ಹಳೇಹುಬ್ಬಳ್ಳಿಯ ಅನಂತನಾಥ ಬಸದಿಯಲ್ಲಿ ಧರ್ಮಧ್ವಜಾರೋಹಣ, ಜಿನಬಿಂಬ ಹಾಗೂ ಮಹಾವೀರ ಚಿತ್ರ ಸಹಿತ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಏಪ್ರಿಲ್ 6ರಿಂದ ಆರಂಭಗೊಂಡಿದ್ದ ಜನ್ಮಕಲ್ಯಾಣಕ ಮಹೋತ್ಸವದಲ್ಲಿ ಆರೋಗ್ಯ ತಪಾಸಣೆ, ಜೈನ ಧ್ವಜ ಮೆರವಣಿಗೆ, ಸಾಮೂಹಿಕ ವಿಶ್ವಶಾಂತಿ ಪ್ರಾರ್ಥನೆ, ಧರ್ಮ ಸಭೆ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಗವಾನ್ ಮಹಾವೀರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನವೀನಕುಮಾರ ತಿಪ್ಪಾ ‘ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಅಹಿಂಸೆ ತತ್ವ ಬೋಧಿಸಿದರು.
ಸಮಾಜದಲ್ಲಿ ಸಮಾನತೆ ಸಂದೇಶ ಸಾರಿದರು’ ಎಂದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಸ್ಥರಾದ ಪಿ.ವೈ. ನಾಯಕ ಪ್ರಸನ್ನಕುಮಾರ ಬಾಳಾನಾಯಕ್ ಎಂ.ಬಿ. ಕಪಲಿ ಸಿಬ್ಬಂದಿ ವಿ.ಎಫ್. ಬಿಜಾಪೂರ ಗಿಣಿಮಾವು ವರ್ಷಾ ಜಾಧವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.