ADVERTISEMENT

ಹುಬ್ಬಳ್ಳಿ: ರೇಷ್ಮೆ ಸೀರೆಗಳ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 14:18 IST
Last Updated 13 ಮಾರ್ಚ್ 2022, 14:18 IST
ಹುಬ್ಬಳ್ಳಿಯ ನವೀನ್‌ ಹೋಟೆಲ್‌ನಲ್ಲಿ ಶಗುನ್‌ ಆಯೋಜಿಸಿದ್ದ ‘ಸಿಲ್ಕ್‌ ವೀವರ್ಸ್‌’–ಕೈಮಗ್ಗ ಉತ್ಪನ್ನಗಳು, ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಭಾನುವಾರ ಚಾಲನೆ ನೀಡಿದ, ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಸ್ವಾತಿ ಮಾಳಗಿ ಮತ್ತು ಸಮಧುರ ಫೌಂಡೇಷನ್‌ ಅಧ್ಯಕ್ಷೆ ಪ್ರೇಮಾ ಹೂಗಾರ ಅವರು ಸೀರೆಗಳನ್ನು ವೀಕ್ಷಿಸಿದರು

ಹುಬ್ಬಳ್ಳಿ: ನಗರದ ನವೀನ್‌ ಹೋಟೆಲ್‌ನಲ್ಲಿ ಶಗುನ್‌ ಆಯೋಜಿಸಿದ್ದ ‘ಸಿಲ್ಕ್‌ ವೀವರ್ಸ್‌’–ಕೈಮಗ್ಗ ಉತ್ಪನ್ನಗಳು, ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಭಾನುವಾರ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಸ್ವಾತಿ ಮಾಳಗಿ ಮತ್ತು ಸಮಧುರ ಫೌಂಡೇಷನ್‌ ಅಧ್ಯಕ್ಷೆ ಪ್ರೇಮಾ ಹೂಗಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಇಬ್ಬರೂ, ‘ದೇಶದ ವಿವಿಧ ಭಾಗಗಳ ವಿಶೇಷ ವಿನ್ಯಾಸದ ಸೀರೆಗಳ ಪ್ರದರ್ಶನ ಮತ್ತು ಖರೀದಿಗೆ ಹಾಗೂ ನೇಕಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದರು.

ಕರ್ನಾಟಕ ಸೇರಿದಂತೆ ಕಾಶ್ಮೀರ, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಸೀರೆಗಳು, ಗುಜರಾತ್‌ನ ಬಂಧಾನಿ–ಬಂಧೇಜ್‌ನಂ ಕಲೆಯುಳ್ಳ ವಸ್ತ್ರಗಳು, ಆಭರಣಗಳು, ಗೃಹಾಲಂಕಾರ ವಸ್ತುಗಳು ಹಾಗೂ ಕೈಮಗ್ಗ ಉತ್ಪನ್ನಗಳ 60 ಮಳಿಗೆಗಳನ್ನು ತೆರೆಯಲಾಗಿದೆ. ಮಾರ್ಚ್‌ 21ರವರೆಗೆ ಪ್ರದರ್ಶನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.