ADVERTISEMENT

ಪೊಲೀಸರ ಮೇಲೆ ಇರಾನಿ ಗ್ಯಾಂಗ್‌ ದಾಳಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 19:44 IST
Last Updated 26 ನವೆಂಬರ್ 2020, 19:44 IST
ಧಾರವಾಡದ ಸಂಗಮ್ ವೃತ್ತದ ಬಳಿ ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ನಡೆದ ಸ್ಥಳ ಪರಿಶೀಲನೆಯನ್ನು ಎಸಿಪಿ ಜಿ.ಅನುಷಾ ಗುರುವಾರ ನಡೆಸಿದರು
ಧಾರವಾಡದ ಸಂಗಮ್ ವೃತ್ತದ ಬಳಿ ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ನಡೆದ ಸ್ಥಳ ಪರಿಶೀಲನೆಯನ್ನು ಎಸಿಪಿ ಜಿ.ಅನುಷಾ ಗುರುವಾರ ನಡೆಸಿದರು   

ಧಾರವಾಡ: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಅವರು ಗುರುವಾರ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಇವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎರಡು ಕಳ್ಳತನ ಪ್ರಕರಣಗಳಲ್ಲಿ ಇರಾನಿ ಗ್ಯಾಂಗಿಗೆ ಸೇರಿದ ಆರು ಜನರ ಕೈವಾಡ ಇರುವ ಶಂಕೆಯ ಮೇಲೆ ಅಲ್ಲಿನ ಪೊಲೀಸರು ನಗರಕ್ಕೆ ಬಂದಿದ್ದರು. ಪಿಎಸ್‌ಐಗಳಾದ ಸಂತೋಷ್ ಹಾಗೂ ರವಿಕುಮಾರ್ ನೇತೃತ್ವದ ತಂಡ ನಗರದಲ್ಲಿ ಆರೋಪಿಗಳಿಗಾಗಿ ಬಲೆ ಬೀಸಿತ್ತು.

ಇಲ್ಲಿನ ಸಂಗಮ್ ವೃತ್ತದ ಬಳಿ ಆರೋಪಿಗಳು ಬರುತ್ತಾರೆ ಎಂಬಖಚಿತ ಮಾಹಿತಿ ಮೇರೆಗೆ ಪೊಲೀಸರು ಮಧ್ಯಾಹ್ನ ಹೊಂಚು ಹಾಕಿ ಕೂತಿದ್ದರು. ನಿರೀಕ್ಷೆಯಂತೆ ಬಂದ ಇಬ್ಬರನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆ ಆರೋಪಿಗಳು ಬಿಯರ್ ಬಾಟಲಿಯಿಂದ ದಾಳಿ ಮಾಡಿದರು. ಇದರಿಂದ ಸಂತೋಷ್ ಸೇರಿದಂತೆ ಇತರ ಇಬ್ಬರಿಗೆ ಗಾಯಗಳಾಗಿವೆ.

ADVERTISEMENT

ಹಲ್ಲೆ ನಡೆಸಿದ ಒಬ್ಬ ಪರಾರಿಯಾದರೆ, ಬಿಲಾಲ್ ತಾನೇ ಬಾಟಲಿಯಿಂದ ಚುಚ್ಚಿಕೊಂಡನು. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.