ADVERTISEMENT

ವಿಡಿಯೊ: UPSC ಸಂದರ್ಶನದಲ್ಲಿ ದೇಶದಲ್ಲೇ ಎರಡನೇ ಗರಿಷ್ಠ ಅಂಕ ಪಡೆದ ಇಶಿಕಾ ಸಿಂಗ್‌

ಪ್ರಜಾವಾಣಿ ವಿಶೇಷ
Published 1 ಮೇ 2025, 15:32 IST
Last Updated 1 ಮೇ 2025, 15:32 IST

ಹುಬ್ಬಳ್ಳಿಯ ಅಕ್ಷಯ ಕಾಲೊನಿಯ ನಿವಾಸಿ ಡಾ.ಇಶಿಕಾ ಸಿಂಗ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್‌ ಪಡೆದಿದ್ದಾರೆ. ಅವರು ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. ಇಶಿಕಾ ಸಿಂಗ್ ಅವರ ತಂದೆ ರಾಜೇಶಕುಮಾರ್ ಸಿಂಗ್‌ ಉದ್ಯಮಿಯಾಗಿದ್ದು, ತಾಯಿ ಕಿರಣ್‌ ಸಿಂಗ್ ಹಿಂದಿ ಉಪನ್ಯಾಸಕಿ. ಅವರು ಮೂಲತಃ ಜಾರ್ಖಂಡ್‌ನ ಜೆಮ್‌ಶೆಡ್‌ಪುರದವರು. ಮೂರು ದಶಕಗಳಿಂದ ಹುಬ್ಬಳ್ಳಿಯಲ್ಲಿದ್ದಾರೆ. ಇಶಿಕಾ ಇಲ್ಲಿನ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ, ಗ್ಲೋಬಲ್ ಪಿಯು ವಿಜ್ಞಾನ ಕಾಲೇಜಿನಲ್ಲಿ ಪಿಯು ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಬಿಬಿಎಸ್‌ ಪದವಿ ಪಡೆದಿದ್ದಾರೆ. ಈ ವಿಡಿಯೊದಲ್ಲಿ, ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ಅನೇಕ ಟಿ‌ಪ್ಸ್‌ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.