ADVERTISEMENT

ಕಾರ್ಮಿಕ ಮುಖಂಡ ಡಾ. ಕೆ.ಎಸ್. ಶರ್ಮಾ ಆತ್ಮಕತೆ ಬಿಡುಗಡೆ ಮಾಡಿದ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 13:04 IST
Last Updated 30 ಸೆಪ್ಟೆಂಬರ್ 2021, 13:04 IST
ಹುಬ್ಬಳ್ಳಿಯಲ್ಲಿ ಗುರುವಾರ ಕಾರ್ಮಿಕ ಮುಖಂಡ ಡಾ.ಕೆ.ಎಸ್. ಶರ್ಮಾ ಅವರ (ಎಡದಿಂದ ನಾಲ್ಕನೇಯವರು) ಆತ್ಮಕತೆ ‘ಡಾ.ಕೆ.ಎಸ್. ಶರ್ಮಾ ಜೀವಾನುಭವಗಳ ಸಂಹಿತೆ; ಎಂಭತ್ತೆಂಟರ ಹೊಸ್ತಿಲಲ್ಲಿ ಸಿಂಹಾವಲೋಕನ’ ಹಾಗೂ ‘ಪೋಸ್ಟ್ ಕೊಲೊನಿಯಲ್ ಸ್ಟೇಟ್ ಇನ್ ಇಂಡಿಯಾ: ಎ ಮಾರ್ಕ್ಸಿಸ್ಟ್ ಪರ್ಸ್ಪೆಕ್ಟಿವ್’ ಕೃತಿಗಳನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು. ಸುಮಿತ್ರಾ ಪೋತ್ನೀಸ್, ಶ್ಯಾಮಸುಂದರ ಬಿದರಕುಂದಿ, ಮೋಹನ ಲಿಂಬಿಕಾಯಿ, ಶಾಸಕ ಸಿ.ಎಂ. ನಿಂಬಣ್ಣವರ, ಡಾ.ಕೆ.ಸಿ.‌ ಶಿವಾರೆಡ್ಡಿ, ರವೀಂದ್ರ ಹಳಿಂಗಳಿ ಹಾಗೂ ಸುಲೋಚನಾ ಪೋತ್ನೀಸ್ ಇದ್ದಾರೆ
ಹುಬ್ಬಳ್ಳಿಯಲ್ಲಿ ಗುರುವಾರ ಕಾರ್ಮಿಕ ಮುಖಂಡ ಡಾ.ಕೆ.ಎಸ್. ಶರ್ಮಾ ಅವರ (ಎಡದಿಂದ ನಾಲ್ಕನೇಯವರು) ಆತ್ಮಕತೆ ‘ಡಾ.ಕೆ.ಎಸ್. ಶರ್ಮಾ ಜೀವಾನುಭವಗಳ ಸಂಹಿತೆ; ಎಂಭತ್ತೆಂಟರ ಹೊಸ್ತಿಲಲ್ಲಿ ಸಿಂಹಾವಲೋಕನ’ ಹಾಗೂ ‘ಪೋಸ್ಟ್ ಕೊಲೊನಿಯಲ್ ಸ್ಟೇಟ್ ಇನ್ ಇಂಡಿಯಾ: ಎ ಮಾರ್ಕ್ಸಿಸ್ಟ್ ಪರ್ಸ್ಪೆಕ್ಟಿವ್’ ಕೃತಿಗಳನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು. ಸುಮಿತ್ರಾ ಪೋತ್ನೀಸ್, ಶ್ಯಾಮಸುಂದರ ಬಿದರಕುಂದಿ, ಮೋಹನ ಲಿಂಬಿಕಾಯಿ, ಶಾಸಕ ಸಿ.ಎಂ. ನಿಂಬಣ್ಣವರ, ಡಾ.ಕೆ.ಸಿ.‌ ಶಿವಾರೆಡ್ಡಿ, ರವೀಂದ್ರ ಹಳಿಂಗಳಿ ಹಾಗೂ ಸುಲೋಚನಾ ಪೋತ್ನೀಸ್ ಇದ್ದಾರೆ   

ಹುಬ್ಬಳ್ಳಿ: ‘ಬಹುಮುಖ ವ್ಯಕ್ತಿತ್ವದ ಹೋರಾಟಗಾರ ಕೆ.ಎಸ್. ಶರ್ಮಾ ಅವರ ಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ. ಬದುಕಿನುದ್ದಕ್ಕೂ ಜನಪರತೆಯನ್ನು ಮೈಗೂಡಿಸಿಕೊಂಡಿರುವ ಅವರು, ನಾನೂ ಸೇರಿದಂತೆ ಹಲವರಿಗೆ ಮಾರ್ಗದರ್ಶಕರಾಗಿದ್ದಾರೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದರು.

ನಗರದಲ್ಲಿ ಗುರುವಾರ ನಡೆದ ಕಾರ್ಮಿಕ ಮುಖಂಡ ಡಾ.ಕೆ.ಎಸ್. ಶರ್ಮಾ ಅವರ 88ನೇ ಜನ್ಮದಿನದ ಪ್ರಯುಕ್ತ ಆತ್ಮಕತೆ ‘ಡಾ.ಕೆ.ಎಸ್. ಶರ್ಮಾ ಜೀವಾನುಭವಗಳ ಸಂಹಿತೆ; ಎಂಭತ್ತೆಂಟರ ಹೊಸ್ತಿಲಲ್ಲಿ ಸಿಂಹಾವಲೋಕನ’ ಹಾಗೂ ಪಿಎಚ್‌.ಡಿ ಮಹಾಪ್ರಬಂಧ ‘ಪೋಸ್ಟ್ ಕೊಲೊನಿಯಲ್ ಸ್ಟೇಟ್ ಇನ್ ಇಂಡಿಯಾ: ಎ ಮಾರ್ಕ್ಸಿಸ್ಟ್ ಪರ್ಸ್ಪೆಕ್ಟಿವ್’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು

‘ಕಾನೂನು ಪದವಿ ಓದುವಾಗ ಶರ್ಮಾ ಅವರು ನನಗೆ ಗುರುಗಳಾಗಿದ್ದರು.ಶ್ರೇಷ್ಠ ವ್ಯಕ್ತಿ ಪ್ರಶಸ್ತಿಯನ್ನು ಯಾರಿಗಾದರೂ ಕೊಡಬೇಕಾದರೆ, ಅದು ಮೊದಲು ಶರ್ಮಾ ಅವರಿಗೆ ಸಲ್ಲಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಹಂಪಿ ವಿಶ್ವವಿದ್ಯಾಲಯದ ರಾಜಕುಮಾರ್ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ.ಕೆ.ಸಿ.‌ ಶಿವಾರೆಡ್ಡಿ ಮಾತನಾಡಿ, ‘ಶರ್ಮಾ ಅವರು ಕೇವಲ ಮನೆಯ ವ್ಯಕ್ತಿಯಾಗದೆ, ಇಡೀ ಸಮಾಜದ ವ್ಯಕ್ತಿಯಾಗಿ ಬದುಕಿದ್ದಾರೆ. ಕಾರ್ಮಿಕರು ಹಾಗೂ ನೌಕರರ23 ಸಂಘಟನೆಗಳನ್ನು ಹುಟ್ಟುಹಾಕಿದ ಶರ್ಮಾ, ಅವರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಷ್ಟೀಯತೆ ಮತ್ತು ಧರ್ಮ ಎಂಬುದು ಮಾದಕ ಮತ್ತು ಇದ್ದಂತೆ. ನಿಜವಾದ ಧಾರ್ಮಿಕನಾದವನು ಹಿಂಸಾರೂಪಿ ಆಗಿರುವುದಿಲ್ಲ. ಆತ ಎಲ್ಲರನ್ನೂ ಪ್ರೀತಿಸುತ್ತಾನೆ ಎಂಬ ಬೇಂದ್ರೆ ಅವರ ಮಾತನ್ನು ಶರ್ಮಾ ಅವರು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಮೋಹನ ಲಿಂಬಿಕಾಯಿ,‘ಕಾರ್ಮಿಕ ಹೋರಾಟಗಾರ, ಸಾಹಿತಿ, ಪತ್ರಕರ್ತ, ನಾಟಕಕಾರ, ಪ್ರಾಧ್ಯಾಪಕ ಹಾಗೂ ವಕೀಲರಾದ ಶರ್ಮಾ ಅವರದು ಬಹುಮುಖ ವ್ಯಕ್ತಿತ್ವ. ಸಾಹಿತಿ ದ.ರಾ. ಬೇಂದ್ರೆ ಅವರ ಮಾನಸ ಪುತ್ರ ಎಂದೇ ಜನಪ್ರಿಯರಾಗಿದ್ದ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ‘ನಾಕುತಂತಿ’ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಕಾರ್ಮಿಕರ ಆಶಾಕಿರಣವಾಗಿದ್ದಾರೆ’ ಎಂದರು.

ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ, ಸಾಹಿತಿಶ್ಯಾಮಸುಂದರ ಬಿದರಕುಂದಿ, ವಕೀಲ ರವೀಂದ್ರ ಹಳಿಂಗಳಿ ಹಾಗೂ ಶರ್ಮಾ ಮಾತನಾಡಿದರು. ಡಾ. ಗಾಯತ್ರಿ ದೇಶಪಾಂಡೆ ಕ್ರಾಂತಿ ಗೀತೆಗಳನ್ನು ಹಾಡಿದರು. ಪ್ರೊ. ರವೀಂದ್ರ ಶಿರೋಳ್ಕರ್ ನಿರೂಪಣೆ ಮಾಡಿದರು. ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ್, ಕೃತಿಗಳ ಪ್ರಕಟಣೆಯ ಪ್ರಾಯೋಜಕರಾದ ಸುಮಿತ್ರಾ ಕೆ. ಪೋತ್ನೀಸ್ ಹಾಗೂ ಸುಲೋಚನಾ ಕೆ. ಪೋತ್ನಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.