ADVERTISEMENT

ಮಧ್ಯಸ್ಥಿಕೆ ಅಭಿಯಾನ: ರಾಜ್ಯದಲ್ಲಿ 5575 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 0:32 IST
Last Updated 10 ಅಕ್ಟೋಬರ್ 2025, 0:32 IST
<div class="paragraphs"><p>ಮಧ್ಯಸ್ಥಿಕೆ ಅಭಿಯಾನ: 5575 ಪ್ರಕರಣ ಇತ್ಯರ್ಥ</p></div>

ಮಧ್ಯಸ್ಥಿಕೆ ಅಭಿಯಾನ: 5575 ಪ್ರಕರಣ ಇತ್ಯರ್ಥ

   

ಧಾರವಾಡ: ರಾಜ್ಯದಲ್ಲಿ ನಡೆದ ಮಧ್ಯಸ್ಥಿಕೆ ಅಭಿಯಾನದಲ್ಲಿ 5,575 ಪ‍್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಏರ್ಪಡಿಸಿದ ಮಧ್ಯಸ್ಥಿಕೆ ಅಭಿಯಾನದಲ್ಲಿ (ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಾಚರಣೆ– ಜುಲೈ 1ರಿಂದ ಅಕ್ಟೋಬರ್ 6ರವರೆಗೆ) ರಾಜ್ಯದ ಕೋರ್ಟ್‌ಗಳಲ್ಲಿ ಬಾಕಿ ಇರುವ 13,86,837 ಪ್ರಕರಣಗಳ ಪೈಕಿ 76,197 ಪ್ರಕರಣಗಳನ್ನು ಗುರುತಿಸಿ, ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿತ್ತು.

ADVERTISEMENT

47,080 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ತೆಗೆದುಕೊಂಡು 5,575 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 26,144 ಪ್ರಕರಣ ಇತ್ಯರ್ಥವಾಗಿಲ್ಲ. 15361 ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕಿದ್ದು, ಪ್ರಕ್ರಿಯೆ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಮುಂದುವರಿಯಲಿದೆ.

3,038 ವೈವಾಹಿಕ- ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಗೊಳಿಸಲಾಗಿದೆ. 159 ದಂಪತಿ ಒಂದಾಗಿದ್ದಾರೆ. 668 ಚೆಕ್ ಬೌನ್ಸ್ ಕೇಸ್‍ಗಳು, 649 ಪಾಲು ವಿಭಾಗ, 576 ಇತರ ಸಿವಿಲ್ ಪ್ರಕರಣ ವಿಲೇವಾರಿಯಾಗಿವೆ.

ಐದು ವರ್ಷಕ್ಕಿಂತ ಹೆಚ್ಚು ಅವಧಿಯ 177, ಹತ್ತು ರ್ಷಕ್ಕಿಂತ ಹೆಚ್ಚು ಅವಧಿಯ 23 ಹಾಗೂ ಹದಿನೈದು ವರ್ಷಕ್ಕಿಂತ ಹೆಚ್ಚು ಅವಧಿಯ 6 ಪ್ರಕರಣಗಳನ್ನು ಅಭಿಯಾನದಲ್ಲಿ ಇತ್ಯರ್ಥಗೊಳಿಸಲಾಗಿದೆ. 163 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಅಭಿಯಾನದ ಪ್ರಯೋಜನ ಪಡೆದಿದ್ದಾರೆ. ಪ್ರಕರಣಗಳಲ್ಲಿ 1,300 ಮಧ್ಯಸ್ಥಿಕೆಗಾರರು ಪಾಲ್ಗೊಂಡಿದ್ದರು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಳಿಸಿರುವುದಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್.ದೊಡ್ಡಮನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.