ADVERTISEMENT

‘ಪಟಾ ಪಟಾ ಗಾಳಿಪಟ...’ ಹಾಡಿಗೆ ಹೆಜ್ಜೆ ಹಾಕಿದ ಸಚಿವೆ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 4:42 IST
Last Updated 19 ನವೆಂಬರ್ 2020, 4:42 IST
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಆಪ್ತಮಿತ್ರ ಚಿತ್ರದ ‘ಪಟ ಪಟ ಗಾಳಿಪಟ..’ ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಆಪ್ತಮಿತ್ರ ಚಿತ್ರದ ‘ಪಟ ಪಟ ಗಾಳಿಪಟ..’ ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.    
""
""
""

ಹುಬ್ಬಳ್ಳಿ: ಬುಧವಾರ ರಾತ್ರಿಯಿಂದ ನಗರದಲ್ಲಿ ವಾಸ್ತವ್ಯ ಹೂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಇಲ್ಲಿನ ಬಾಲಮಂದಿರದ ಮಕ್ಕಳೊಂದಿಗೆ ಆಟವಾಡಿ ನಲಿದರು. ಆಪ್ತಮಿತ್ರ ಚಿತ್ರದ ‘ಪಟ ಪಟ ಗಾಳಿಪಟ..’ ಹಾಡಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ಸಚಿವೆ ಜೊತೆಗೆ ಇಲಾಖೆಯ ಅಧಿಕಾರಿಗಳು ಮತ್ತು ಮಕ್ಕಳು ಕೂಡ ನಲಿದಾಡಿದರು.

ಉಣಕಲ್‌ನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಅವರು ಗುರುವಾರ ಬೆಳಿಗ್ಗೆ ಮಕ್ಕಳ ಜೊತೆ ವ್ಯಾಯಾಮ ಮಾಡಿದರು. ಘಂಟಿಕೇರಿಯ ಕ್ರಿಶ್ಚಿಯನ್‌ ಕಾಲೊನಿಯ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳು ಪ್ರದರ್ಶಿಸಿದ ಯೋಗ ಮತ್ತು ಏರೋಬಿಕ್ಸ್‌ ಪ್ರದರ್ಶನ ವೀಕ್ಷಿಸಿದರು. ಮಕ್ಕಳನ್ನು ಎತ್ತಿಕೊಂಡು ಕೆಲಹೊತ್ತು ಮುದ್ದಾಡಿ ಆ ಮಕ್ಕಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ. ಎಚ್.ಲಲಿತಾ, ಬಾಲ ಮಂದಿರದ ಅಧೀಕ್ಷಕಿ ಅತ್ತಿಕಾ ಸಿದ್ದಿಕೆ, ವಾರ್ತಾ ಇಲಾಖೆ ಹಿರಿಯ ಸಹಾಯ ನಿರ್ದೇಶಕ ಮಂಜುನಾಥ ಡೊಳ್ಳಿನ ಇದ್ದರು.

ADVERTISEMENT
ಮಗುವನ್ನು ಎತ್ತಿಕೊಂಡು ಖುಷಿಪಟ್ಟ ಶಶಿಕಲಾ ಜೊಲ್ಲೆ
ಸಚಿವರ ಮುಂದೆ ಏರೋಬಿಕ್ಸ್‌ ಪ್ರದರ್ಶಿಸಿದ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.