ADVERTISEMENT

ಕೇಂದ್ರ ಬಜೆಟ್‌ನಿಂದ ದುಡಿಯುವ ಕೈಗೆ ಕೊಡಲಿ ಪೆಟ್ಟು: ಶಾಸಕ ಪ್ರಸಾದ ಅಬ್ಬಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 11:45 IST
Last Updated 1 ಫೆಬ್ರುವರಿ 2022, 11:45 IST
ಪ್ರಸಾದ ಅಬ್ಬಯ್ಯ
ಪ್ರಸಾದ ಅಬ್ಬಯ್ಯ    

ಹುಬ್ಬಳ್ಳಿ: ದೇಶದ ಆಹಾರ ಭದ್ರತೆಗೆ ಮೀಸಲಿಟ್ಟಿದ್ದ ₹2.1 ಲಕ್ಷ ಕೋಟಿ ಸಬ್ಸಿಡಿ ಹಣವನ್ನು ₹1.46 ಲಕ್ಷ ಕೋಟಿಗೆ ಇಳಿಸಿ ದೇಶದ ಆಹಾರ ಭದ್ರತೆಗೆ ದೊಡ್ಡ ಪೆಟ್ಟು ನೀಡಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‍ಗೆ ಪ್ರತಿಕ್ರಿಯಿಸಿರುವ ಅವರು‌ ‘ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಆಸರೆಯಾಗಿದ್ದ ಉದ್ಯೋಗ ಖಾತ್ರಿ ಯೋಜನೆಗೆ ಮೀಸಲಿಟ್ಟಿದ್ದ ₹73 ಸಾವಿರ ಕೋಟಿ ಅನುದಾನವನ್ನು ₹25 ಸಾವಿರ ಕೋಟಿಗೆ ಕಡಿತಗೊಳಿಸಿದ್ದರಿಂದ ದುಡಿಯುವ ವರ್ಗಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಅಡುಗೆ ಅನಿಲದ ಸಬ್ಸಿಡಿಯನ್ನೂ ಸದ್ದಿಲ್ಲದೇ ನಿಲ್ಲಿಸಿದ ಕೇಂದ್ರ ಸರ್ಕಾರ, ರೈತರ ಆದಾಯ ದ್ವಿಗುಣಕ್ಕೂ ಯಾವುದೇ ಕ್ರಮ ವಹಿಸಿಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಪೂರಕವಾದ ಕ್ರಮ ಕೈಗೊಂಡಿಲ್ಲ’ ಎಂದು ಟೀಕಿಸಿದ್ದಾರೆ.

‘ದುಡಿಯುವ ಹಾಗೂ ಮಧ್ಯಮ ವರ್ಗಕ್ಕೆ ಬಜೆಟ್‍ನಲ್ಲಿ ಯಾವುದೇ ಅನುಕೂಲ ಕಲ್ಪಿಸದೇ ತೆರಿಗೆ ಮೂಲಕ ಜನರ ಜೇಬಿನಿಂದ ಹಣ ಲೂಟಿ ಹೊಡೆದು ಜಿಡಿಪಿಯನ್ನು 9.26ಕ್ಕೆ ಏರಿಕೆ ಮಾಡುವ ನಿರೀಕ್ಷೆ ಕೇಂದ್ರದ್ದಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.