
ಕುಂದಗೋಳ: ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಈ ಬಾರಿಯೂ ಮೊಹರಂ ಹಬ್ಬವನ್ನು ಜುಲೈ 7ರಂದು ಆಚರಿಸಲಾಗುತ್ತದೆ.
ಪ್ರತಿವರ್ಷ ಇಲ್ಲಿನ ಗ್ರಾಮ ಪಂಚಾಯಿತಿಯವರು ಜವಾಬ್ದಾರಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಗ್ರಾಮದಲ್ಲಿ ಡೋಲಿಗಳ ಮೆರವಣಿಗೆ ಜಾನಪದ ಸೊಗಡು ಹೆಚ್ಚಿಸಿ ಜಾತ್ರೆಯ ರೀತಿಯಲ್ಲಿ ಮೋಹರಂ ಆಚರಿಸಲಾಗುತ್ತದೆ.
ಮೊಹರಂ ಆಚರಣೆ ಒಂದೇ ಊರಿಗೆ ಸೀಮಿತವಾಗಿಲ್ಲ. ಯರಗುಪ್ಪಿಯ 3 ಡೊಲಿಗಳು, ಚಿಕ್ಕನರ್ತಿ 2, ಯರಿನಾರಾಯಣಪುರ ಹಾಗೂ ಮುಳ್ಳೊಳ್ಳಿ ಗ್ರಾಮದ ತಲಾ 1 ಒಟ್ಟು 7 ಡೋಲಿಗಳು ಸೇರಿ ಮೊಹರಂ ಆಚರಿಸಲಾಗುತ್ತದೆ.
ಹಿಂದೂ-ಮುಸ್ಲಿಂ ಸಮುದಾಯದವರು ಮತ ಭೇದವಿಲ್ಲದೆ ಆಚರಣೆಯಲ್ಲಿ ಪಾಲ್ಗೊಂಡು ಭಾವಕ್ಯತೆಯಿಂದ ಆಚರಿಸಲಾಗುತ್ತದೆ. ಯುವಕರು ಆ ದಿನ ಹೆಜ್ಜೆ ಮೇಳ ಆಡುತ್ತಾರೆ. ವಿಜೇತರಿಗೆ ಬಂಗಾರದ ಬಹುಮಾನ ನೀಡಲಾಗುತ್ತದೆ.
ಅಂದು ಸಂಜೆ ಯರಗುಪ್ಪಿಯ ಶಾಲಾ ಮೈದಾನದಲ್ಲಿ ಡೋಲಿಗಳು ಸೇರಿ ಹಬ್ಬದ ಮೆರಗು ಪಡೆಯುತ್ತದೆ. ಇದರೊಂದಿಗೆ ಹೆಜ್ಜೆಮೇಳಗಳ ಸಂಭ್ರಮ. ನಂತರ ಡೋಲಿಗಳು ಹೊಳೆಗೆ ಹೊಗಿ ವಾಪಸ್ ಬರುವಾಗ ಹುತಾತ್ಮರ ಶೋಕ ಗೀತೆಯೊಂದಿಗೆ ಮೊಹರಂ ಆಚರಣೆ ಸಂಪನ್ನಗೊಳ್ಳುತ್ತದೆ.
ಸಂದಲ್ ರಾತ್ರಿ: ಯರಗುಪ್ಪಿ ಗ್ರಾಮದಲ್ಲಿ ಜುಲೈ 5 ರಂದು ಸಂದಲ್ ರಾತ್ರಿ ನಡೆಯಲಿದೆ. 6ರಂದು ಕತ್ತಲ್ ರಾತ್ರಿ. 7 ರಂದು ಮೊಹರಂ ಕೊನೆಯ ದಿನ ದೇವರು ಹೊಳೆಗೆ ಹೊಗುವ ಕಾರ್ಯ ನಡೆಯುತ್ತದೆ.
ಹೆಜ್ಜೆಮೇಳ ಸ್ಪರ್ಧೆ: ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ಜುಲೈ 7ರಂದು ಮಧ್ಯಾಹ್ನ 2ಕ್ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹೆಜ್ಜೆಮೇಳ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ವಿಜೇತರಿಗೆ 10 ಗ್ರಾಂ ಚಿನ್ನ, ಫಲಕ. (ಪ್ರಥಮ), 5 ಗ್ರಾಂ ಚಿನ್ನ, ಫಲಕ (ದ್ವಿತೀಯ), 2.5ಗ್ರಾಂ ಚಿನ್ನ, ಫಲಕ (ತೃತೀಯ) ಹಾಗೂ ನಾಲ್ಕನೆಯ ಬಹುಮಾನವಾಗಿ ₹15 ಸಾವಿರ ನಗದು, ಫಲಕ. ವಿಶೇಷ ತಂಡಕ್ಕೆ ₹1,001 ನಗದು ಹಾಗೂ ಫಲಕ ನೀಡಲಾಗುತ್ತದೆ.
ಮಾಹಿತಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಬಸವರಾಜ ಗೌರಿ ಮೊ: 8904570422 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.