
ಪ್ರಜಾವಾಣಿ ವಾರ್ತೆ
ಧಾರವಾಡ: ‘ಅಡುಗೆ ಸ್ಪರ್ಧೆಯು ಮಕ್ಕಳಿಗೆ ಬಹುಮುಖಿ ಕೌಶಲ ಕಲಿಸುತ್ತದೆ’ ಎಂದು ಪಾಲಾಕ್ಷ ಪೋದಾರ ಲರ್ನ್ ಸ್ಕೂಲ್ ಅಧ್ಯಕ್ಷ ಪಂಕಜ್ ದೇಸಾಯಿ ಹೇಳಿದರು.
ನಗರದಲ್ಲಿರುವ ಸ್ಕೂಲ್‍ನಲ್ಲಿ ಈಚೆಗೆ ನಡೆದ ಮಾಸ್ಟರ್ ಶೆಫ್-ಅಗ್ನಿರಹಿತ ಅಡುಗೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಈ ಸ್ಪರ್ಧೆಯು ತಂಡದೊಂದಿಗೆ ಕೆಲಸ, ಸೃಜನಶೀಲತೆ, ಪ್ರಸ್ತುತಿ ಕೌಶಲ, ಆರೋಗ್ಯಕರ ಆಹಾರ ಪದ್ಧತಿಯ ಮಹತ್ವ ತಿಳಿಸುತ್ತದೆ’ ಎಂದರು.
50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೇಮಲ್ ದೇಸಾಯಿ, ವಿನಯ ಕಾಮತ್ ತೀರ್ಪುಗಾರರಾಗಿದ್ದರು.
ಟ್ರಸ್ಟ್ ಸದಸ್ಯ ಹನುಮಂತ ಗಡ, ಕಾರ್ಯದರ್ಶಿ ಅಚಲ್, ಸಿಒಒ ಶಬ್ನಂ ಜಕಾತಿ, ಪ್ರಾಚಾರ್ಯೆ ಕ್ಯಾರೊಲಿನ್, ಏಂಜಲಿನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.