ADVERTISEMENT

ಹುಬ್ಬಳ್ಳಿ: ನವಜಾತ ಶಿಶುವಿನೊಳಗೆ ಭ್ರೂಣದ ಅವಯವ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 2:51 IST
Last Updated 3 ಅಕ್ಟೋಬರ್ 2025, 2:51 IST
<div class="paragraphs"><p>ಭ್ರೂಣ</p></div>

ಭ್ರೂಣ

   

ಹುಬ್ಬಳ್ಳಿ: ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಈಚೆಗೆ ಜನಿಸಿದ ಗಂಡು ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣದ ಅವಯವಗಳು (ದೇಹದ ನಿರ್ದಿಷ್ಟ ಭಾಗ) ಪತ್ತೆಯಾಗಿವೆ.

‘ಕುಂದಗೋಳ ತಾಲ್ಲೂಕಿನ ಮಹಿಳೆಗೆ ಸೆಪ್ಟೆಂಬರ್‌ 23ರಂದು ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಆಕೆಗೆ ಜನಿಸಿದ ಗಂಡು ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣದ ಅವಯವಗಳು ಇರುವುದು ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿದೆ. ಇದು ತೀರಾ ಅಪರೂಪದ ಪ್ರಕರಣ’ ಎಂದು ಕೆಎಂಸಿ–ಆರ್‌ಐ ವೈದ್ಯಕೀಯ ಅಧೀಕ್ಷಕ ಈಶ್ವರ ಹಸಬಿ ತಿಳಿಸಿದರು.

ADVERTISEMENT

‘ಈ ಅವಯವಗಳು ಜೀವಂತ ಇರುವುದಿಲ್ಲ. ಶಿಶುವಿನ ದೇಹದಲ್ಲಿ ಎಲ್ಲಿಯಾದರೂ ಇನ್ನೊಂದು ಭ್ರೂಣದ ಅವಯವ ಇರುವ ಸಾಧ್ಯತೆ ಇರುತ್ತದೆ. ಈ ಮಗುವಿನ ಹೊಟ್ಟೆಯಲ್ಲಿರುವ ಅವಯವಗಳಿಗೆ ರಕ್ತ ಪೂರೈಕೆ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಿಟಿಎನ್‌ಜಿಒ ಪರೀಕ್ಷೆ ಮಾಡಬೇಕಿದೆ. ಮಗುವಿಗೆ ಹೆಚ್ಚಿನ ಸಮಸ್ಯೆ ಆಗದಂತೆ ಇದನ್ನು ನಡೆಸಬೇಕಿದೆ’ ಎಂದರು.   

‘ಮಗುವಿನ ಕುಟುಂಬದಲ್ಲಿ ಯಾರಿಗೂ ಇಂತಹ ಸಮಸ್ಯೆ ಆಗಿಲ್ಲ. ಸದ್ಯ ಮಗುವಿನ ಆರೋಗ್ಯ ಚೆನ್ನಾಗಿದೆ. ಸಿಟಿಎನ್‌ಜಿಒ ಪರೀಕ್ಷೆ ಬಳಿಕ ಕೆಎಂಸಿಇ–ಆರ್‌ಐನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಸಮಸ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.