
ಹುಬ್ಬಳ್ಳಿ: ‘ದೇಹ ಹಾಗೂ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಮೊಬೈಲ್‌ಫೋನ್ ಗೀಳಿನಿಂದ ಪೋಷಕರು ಹೊರಬರಬೇಕು. ಜ್ಞಾನ ಹೆಚ್ಚಿಸುವ ಪುಸ್ತಕಗಳ ಸಾಂಗತ್ಯ ಬೆಳೆಸಿಕೊಂಡರೆ ಮಕ್ಕಳು ಸಹ ಅದನ್ನೇ ಅನುಸರಿಸುತ್ತಾರೆ’ ಎಂದು ಇನ್ನರ್‌ವೀಲ್ ಹುಬ್ಬಳ್ಳಿ ಪಶ್ಚಿಮದ ಅಧ್ಯಕ್ಷೆ ಜ್ಯೋತಿ ಸೇಟ್ ಹೇಳಿದರು.
ತಾಲ್ಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆವರಣದ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಡಿ.ಎಸ್.ಇ.ಆರ್.ಟಿ ಸಹಯೋಗದಲ್ಲಿ ‘ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್, ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆ’ ಅಂಗವಾಗಿ ನಡೆದ ‘ಮೊಬೈಲ್ ಬಿಡಿ- ಪುಸ್ತಕ ಹಿಡಿ; ಪಾಲಕರೇ ಓದೋಣ ಬನ್ನಿ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಅರಳೀಕಟ್ಟೆ ತೆರೆದ ವಾಚನಾಲಯದ ಸಂಯೋಜಕ ಲಿಂಗರಾಜ ರಾಮಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪೋಷಕರು–ಶಿಕ್ಷಕರ ಮಹಾಸಭೆ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಾಧಿಸುವುದು ಅಗತ್ಯವಾಗಿದೆ. ಪಾಲಕರು ಪುಸ್ತಕಗಳನ್ನು ಓದುವುದು ಸಕಾರಾತ್ಮಕ ಬೆಳವಣಿಗೆ. ಈ ಅಭ್ಯಾಸ ಮಕ್ಕಳಲ್ಲೂ ಪ್ರವಹಿಸಬೇಕಿದೆ’ ಎಂದು ತಿಳಿಸಿದರು.
ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ಮೇಘನಾ ಹಿರೇಮಠ, ಸದಸ್ಯರಾದ ರಶ್ಮಿ ವಿ.ಪಾಟೀಲ, ಪಲ್ಲವಿ ರಾಠೋಡ ಮಾತನಾಡಿದರು. ಸುವರ್ಣಾ ಸೇಠ್ ಅವರು ಗರ್ಭಕೋಶ ಕ್ಯಾನ್ಸರ್ ಹಾಗೂ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕರಾದ ಸುಮನ ತೇಲಂಗ ಅಧ್ಯಕ್ಷತೆ ವಹಿಸಿದ್ದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ತಿರ್ಲಾಪೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ.ಪಾಟೀಲ, ಸದಸ್ಯ ಎಚ್.ಎಸ್.ರಾಯನಗೌಡ್ರ, ಮಂಜುನಾಥ ಹುಬ್ಬಳ್ಳಿ, ಪ್ರವೀಣ ಚಿಕ್ಕರಡ್ಡಿ, ಮಹಾಬಳೇಶ್ವರ ಕೊಂಡಗೋಳಿ, ಪ್ರಭು ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.