ಹುಬ್ಬಳ್ಳಿ: ಸಮುದ್ರ ಮೀನುಗಾರಿಕೆ ಮತ್ತು ಸುಸ್ಥಿರ ಮೀನುಗಾರಿಕೆ ಉತ್ತೇಜಿಸಲು ಐದು ವರ್ಷಗಳ ಅವಧಿವರೆಗೆ (2020–21 ರಿಂದ 2024–25) ಆರಂಭಿಸಲಾದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ (ಪಿಎಂಎಂಎಸ್‌ವೈ) ಜಿಲ್ಲೆಯಲ್ಲಿ ನಿರೀಕ್ಷಿತ ಯಶ ಕಂಡಿಲ್ಲ.
2020ರಲ್ಲಿ ಐದು ವರ್ಷಗಳ ಅವಧಿಗೆ ₹20,050 ಕೋಟಿಗಿಂತ ಹೆಚ್ಚಿನ ಬಜೆಟ್‌ನೊಂದಿಗೆ ನೂತನ ಯೋಜನೆ ಆರಂಭವಾಯಿತು. ಮೀನು ಉತ್ಪಾದನೆಯನ್ನು ಹೆಚ್ಚಿಸಲು, ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವುದು ಉದ್ದೇಶವಾಗಿತ್ತು. ಈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ 27 ಜನ ಮಾತ್ರ ಸಹಾಯಧನ ಪಡೆದಿದ್ದಾರೆ. ಒಟ್ಟು ₹205.74 ಲಕ್ಷ ಸಹಾಯಧನ ನೀಡಲಾಗಿದೆ.
‘ಯೋಜನೆಯಡಿ ಮೀನುಗಾರಿಕೆ ರೈತ ಉತ್ಪಾದಕರ ಸಂಸ್ಥೆಗಳು, ಮೀನುಗಾರಿಕೆಗೆ ಸಂಬಂಧಿಸಿದ ನವೋದ್ಯಮಗಳಿಗೆ ಪ್ರಮಾಣಪತ್ರ, ಮತ್ಸ್ಯವಾಹಿನಿ ವಾಹನ ನೀಡಲಾಗುತ್ತದೆ. ಮೀನು ಮಾರಾಟಗಾರರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ ಪ್ರಾಂಚೈಸಿಗಳು, ಮೀನುಗಾರರ ಉತ್ಪಾದಕ ಸಂಸ್ಥೆಗಳು, ಮೀನುಗಾರಿಕೆ ಸಹಕಾರ ಸಂಘಗಳು, ಮಹಿಳಾ ಸ್ವಸಹಾಯ ಗುಂಪುಗಳು, ನಿರುದ್ಯೋಗಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.
‘ತಿಂಗಳಿಗೆ ₹ 3 ಸಾವಿರ ಶುಲ್ಕದಂತೆ ಪರವಾನಗಿ ಮೂಲಕ ಮತ್ಸವಾಹಿನಿಗಳನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗದವರು ₹1 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರು ₹50 ಸಾವಿರ ಪ್ರಾರಂಭಿಕ ಭದ್ರತಾ ಠೇವಣಿ ಇರಿಸಬೇಕು. ಯೋಜನೆಯಡಿ ಈವರೆಗೆ ಐಸ್ ಡಬ್ಬದೊಂದಿಗೆ ಮೋಟಾರ್ ಸೈಕಲ್ ಪಡೆದವರು ನಾಲ್ವರು, ಮೀನು ಮಾರಾಟಕ್ಕಾಗಿ ಐಸ್ ಡಬ್ಬ ಸಹಿತ ಇ– ರಿಕ್ಷಾ ಸೌಲಭ್ಯ ಪಡೆಡದವರು ಒಬ್ಬರು, ಇನ್ಸುಲೇಟೆಡ್ ವಾಹನ ಪಡೆದವರು ಇಬ್ಬರು’ ಎಂದು ಧಾರವಾಡ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಪಾದ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಿಎಂಎಂಎಸ್‌ವೈ ಯೋಜನೆಯು ಜಿಲ್ಲೆಯಲ್ಲಿ ಶೇ 100ರಷ್ಟು ಸಾಧಿಸಬೇಕಿತ್ತು. ಶೇ 50ಕ್ಕೂ ಕಡಿಮೆ ಪ್ರಗತಿಯಾಗಿದೆ. ಸೂಕ್ತ ಮಾರ್ಗದರ್ಶನ ನೀಡಲು ಸಿಬ್ಬಂದಿ ಕೊರತೆಯಿದೆ.ಶ್ರೀಪಾದ ಕುಲಕರ್ಣಿ ಉಪನಿರ್ದೇಶಕ ಧಾರವಾಡ ಮೀನುಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.