ADVERTISEMENT

ರೈಲ್‌ಒನ್ ಆ್ಯಪ್‌ನಲ್ಲಿ ಜನರಲ್ ಟಿಕೆಟ್‌ಗೆ ಡಿಸ್ಕೌಂಟ್! ವಿವರ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:02 IST
Last Updated 2 ಜನವರಿ 2026, 5:02 IST
<div class="paragraphs"><p>ರೈಲ್‌ಒನ್</p></div>

ರೈಲ್‌ಒನ್

   

ಹುಬ್ಬಳ್ಳಿ: ಭಾರತೀಯ ರೈಲ್ವೆಯ ಅಧಿಕೃತ ಅಪ್ಲಿಕೇಷನ್ ‘ರೈಲ್‌ಒನ್’ ಮೂಲಕ ಕಾಯ್ದಿರಿಸದ ಟಿಕೆಟ್‌ ಬುಕ್‌ ಮಾಡಿದರೆ ಶೇ 3ರಷ್ಟು ಪಾವತಿ ರಿಯಾಯಿತಿ ಅವಕಾಶವು ಜನವರಿ 14ರಿಂದ ಜುಲೈ 14ರವರೆಗೆ ಚಾಲ್ತಿಯಲ್ಲಿರುತ್ತದೆ.

ರೈಲ್‌ಒನ್ ಅಪ್ಲಿಕೇಷನ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಹಾಗೂ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ರೈಲು ಸಂಚಾರ ಮಾಹಿತಿ, ಪಿಎನ್‌ಆರ್ ಸ್ಥಿತಿ, ಪ್ರಯಾಣ ಯೋಜನೆ, ರೈಲ್ ಮದದ್ ಸೇವೆಗಳ ಮೂಲಕ ದೂರು ದಾಖಲಿಸಲು ಸಹಾಯ ಪಡೆಯಬಹುದು ಹಾಗೂ ಆಹಾರ ಆರ್ಡರ್ ಮಾಡಬಹುದು.

ADVERTISEMENT

ಎಂ-ಪಿನ್ ಮತ್ತು ಬಯೊಮೆಟ್ರಿಕ್ ಆಧಾರಿತ ಸುರಕ್ಷಿತ ಲಾಗಿನ್ ವ್ಯವಸ್ಥೆ, ಆರ್–ವಾಲೆಟ್ ಪಾವತಿ, ರೈಲ್‌ಕನೆಕ್ಟ್ ಹಾಗೂ ಯುಟಿಎಸ್ ಖಾತೆಗಳೊಂದಿಗೆ ಸುಗಮ ಸಂಯೋಜನೆ ಮಾಡುವ ಮೂಲಕ ಅಪ್ಲಿಕೇಷನ್ ಅನ್ನು ಸುಲಭ ಮತ್ತು ಸುರಕ್ಷಿತವಾಗಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.