ಅಳ್ನಾವರ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಮೀಪದ ಬಾಲಗೇರಿ ಹೊರವಲಯದಲ್ಲಿ ಡೌಗಿ ನಾಲಾ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ್ದ ಕಿರು ಸೇತುವೆ ಕೊಚ್ಚಿ ಹೋಗಿದೆ.
ಅಳ್ನಾವರ ಮತ್ತು ಬೆಣಚಿ ಭಾಗ ರೈತರು ಹೊಲಗಳಿಗೆ ಹೋಗಲು ಈ ಸೇತುವೆ ಸಹಕಾರಿಯಾಗಿತ್ತು. ಕಿರು ಸೇತುವೆ ಕೊಚ್ಚಿ ಹೋಗಿದ್ದರಿಂದ ಪರ್ಯಾಯ ಮಾರ್ಗವಿಲ್ಲದೆ ರೈತರು ಹಗ್ಗದ ಸಹಾಯದಿಂದ ಇನ್ನೊಂದು ದಡ ಸೇರಿ ತಮ್ಮ ಹೊಲಗಳಿಗೆ ತಲುಪುತ್ತಿದ್ದಾರೆ.
ಕೊಚ್ಚಿ ಹೋದ ಕಿರು ಸೇತುವೆಯನ್ನು ಶೀಘ್ರ ದುರಸ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಶನಿವಾರ ಸಹ ಅಳ್ನಾವರ ಭಾಗದಲ್ಲಿ ತುಂತುರು ಮಳೆ ಸುರಿಯಿತು. ಮಳೆಯಿಂದಾಗಿ ಕಟಾವು ಮಾಡಿರುವ ಬೆಳೆ ಒಣಗಿಸಲು ರೈತರಿಗೆ ತೊಂದರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.