
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು 2024ನೇ ಸಾಲಿನ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ’ ಬಹುಮಾನಕ್ಕೆ ಐವರು ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಿದೆ.
ಶಿವಮೊಗ್ಗದ ಸವಿತಾ ನಾಗಭೂಷಣ ಅವರ ‘ದಿನದ ಪ್ರಾರ್ಥನೆ’ ಕಥಾ ಸಂಕಲನ, ಉಡುಪಿಯ ಕಾತ್ಯಾಯಿನಿ ಕುಂಜುಬೆಟ್ಟು ‘ತಂಬೂರಿ’ ಕವನ ಸಂಕಲನ, ಬೆಂಗಳೂರಿನ ರೇಣುಕಾ ಕೋಡಗುಂಟಿ ಅವರ ‘ಚಿಗುರೊಡೆದ ಬೇರು’ ಕಥಾ ಸಂಕಲನ, ಮೈಸೂರಿನ ಗೀತಾ ಸೀತಾರಾಮ ಅವರ ‘ಮಾಳ್ವ ಸಾಮ್ರಾಜ್ಯದ ರಾಜಯೋಗಿನಿ ಅಹಲ್ಯಾಬಾಯಿ ಹೋಳ್ಕರ್’ ಕಾದಂಬರಿ ಮತ್ತು ಶಿವಮೊಗ್ಗದ ಕೆ.ಎಸ್. ಪವಿತ್ರಾ ಅವರ ‘ಧೀತನನ’ ಅಂಕಣ ಕೃತಿಗಳು ಆಯ್ಕೆಯಾಗಿವೆ.
ಪ್ರಶಸ್ತಿಯು ತಲಾ ₹15 ಸಾವಿರ ನಗದು ಒಳಗೊಂಡಿದೆ. ಮಾರ್ಚ್ ಮೊದಲ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.