
ಪ್ರಜಾವಾಣಿ ವಾರ್ತೆಸಂತೋಷ್ ಲಾಡ್
ಧಾರವಾಡ: ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು ಧ್ವಜಾರೋಹಣ ನೇರವೇರಿಸಿದರು.
ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ದೊರೆತ ರಕ್ಷಾ ಕವಚ. ಅದೊಂದು ಸಾಮಾಜಿಕ ಕ್ರಾಂತಿಯ ಗ್ರಂಥ. ಅದನ್ನು ಓದಿದರೆ ಸಾಲದು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಚಿವ ಲಾಡ್ ಹೇಳಿದರು.
ಯುವಜನರು ಕೌಶಲಗಳನ್ನು ಕಲಿಯಬೇಕು. ವೃತ್ತಿಯಲ್ಲಿ ಸಾಧನೆ ಮೆರೆಯಬೇಕು. ದುಶ್ಚಟಗಳ ಗೀಳು ಬೆಳೆಸಿಕೊಳ್ಳಬಾರದು. ಮಾದಕ ಪದಾರ್ಥ, ಮದ್ಯಪಾನ, ಧೂಮಪಾನದಿಂದ ದೂರ ಇರಬೇಕು ಎಂದರು.
ಜಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಹು-ಧಾ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.