
ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ, ಕೆನಡಾದ ಸ್ಲೀಪಿಂಗ್ ಚಿಲ್ಡ್ರನ್ ಅರೌಂಡ್ ದಿ ವರ್ಲ್ಡ್ ಸಂಸ್ಥೆಯ ಸಹಯೋಗದಲ್ಲಿ ದೇಶಪಾಂಡೆ ನಗರದ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಶಾಲಾ ಮಕ್ಕಳಿಗೆ ‘ಸ್ಲಂಬರ್ ಕಿಟ್’ ವಿತರಿಸುವ ಕಾರ್ಯಕ್ರಮ ಈಚೆಗೆ ಜರುಗಿತು.
ಎರಡು ಜತೆ ಉಡುಪು, ಸ್ಕೂಲ್ ಬ್ಯಾಗ್, ಕಂಪಾಸ್, ಕಾರ್ಡ್‌ಬೋರ್ಡ್, ಪಾದರಕ್ಷೆ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಅಗತ್ಯ ವಸ್ತುಗಳಿರುವ ಒಟ್ಟು 500 ಕಿಟ್‌ಗಳನ್ನು ನಗರ ಹಾಗೂ ಗ್ರಾಮೀಣ ಭಾಗದ 250 ವಿದ್ಯಾರ್ಥಿಗಳು, 250 ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಕಿರಣ್ ಹೆಬ್ಸೂರ್, ಕಾರ್ಯದರ್ಶಿ ರಿಷಿ ತಿವಾರಿ, ಚೇರ್ಮನ್ ವಾಮನ್ ದೀಕ್ಷಿತ್ ಮತ್ತು ವೈಸ್ ಚೆರ್ಮನ್ ಜಿತೇಶ ಪಾಂಚಾಲ್, ಎಸ್.ಎಸ್.ಹಿರೇಮಠ, ಎಂ.ವಿ. ಕರಮರಿ, ಎನ್. ಎ. ಚರಂತಿಮಠ, ಶಿವರಾಮ ಹೆಗಡೆ, ಅಬ್ದುಲ್ ಸಾದಿಕ್, ಅರವಿಂದ ಕುಬಸದ, ಸರೇಂದ್ರ ಪರ‍್ವಾಲ, ಎಂ.ಕೆ. ಪಾಟೀಲ, ಸಿದ್ಧೇಶ್ವರ ಕಮ್ಮಾರ, ಪ್ರಕಾಶ ರಾವ್, ರಿಯಾಜ ಬಸರಿ, ಜಗದೀಶ ಮಠದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.