ADVERTISEMENT

ಹುಬ್ಬಳ್ಳಿ: ₹ 711 ಕೋಟಿ ಬಜೆಟ್‌ಗೆ ಅನುಮೋದನೆ

ಹಳೇ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಆದ್ಯತೆ, ಚರ್ಚ್‌ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ

ಪ್ರಮೋದ
Published 18 ಮಾರ್ಚ್ 2021, 4:17 IST
Last Updated 18 ಮಾರ್ಚ್ 2021, 4:17 IST
ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆ   

ಹುಬ್ಬಳ್ಳಿ: ಮಹಾನಗರ ಪಾಲಿಕೆಯು 2021–22ನೇ ಸಾಲಿನಲ್ಲಿ ಅವಳಿ ನಗರಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಕಲ್ಪಿಸಲು ರೂಪಿಸಿದ್ದ ₹ 711 ಕೋಟಿ ಮೊತ್ತದ ಬಜೆಟ್‌ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹಳೇ ಬಡಾವಣೆಗಳರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ಪಾಲಿಕೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಿದ್ದು, ರಸ್ತೆ ನಿರ್ಮಾಣ, ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣಕ್ಕೆ ₹ 128 ಕೋಟಿ ಮೀಸಲಿಟ್ಟಿದೆ.

ರಸ್ತೆಗಳ ವಿಸ್ತರಣೆ ಹಾಗೂ ಭೂ ಸ್ವಾಧೀನದ ಪರಿಹಾರಕ್ಕೆ ಪ್ರತ್ಯೇಕವಾಗಿ ₹ 30 ಕೋಟಿ ನಿಗದಿ ಮಾಡಿದೆ. ಚುನಾವಣೆ ನಡೆಯದ ಕಾರಣ ಪಾಲಿಕೆ ಸದಸ್ಯರಿಲ್ಲ. ಹೀಗಾಗಿ ಅಧಿಕಾರಿಗಳೇ ಬಜೆಟ್ ಸಿದ್ಧಪಡಿಸಿದ್ದಾರೆ.

ADVERTISEMENT

ನಗರೋತ್ಥಾನ ಯೋಜನೆಯಡಿ ₹ 126 ಕೋಟಿ, 15ನೇ ಹಣಕಾಸು ಯೋಜನೆ ಹಾಗೂ ಇನ್ನಿತರ ವಿಶೇಷ ಅನುದಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ರಾಜ್ಯ ಸರ್ಕಾರದಿಂದ ₹ 415 ಕೋಟಿ ಲಭಿಸಲಿದೆ. ₹ 218 ಕೋಟಿಯನ್ನು ತೆರಿಗೆ ಸಂಗ್ರಹ ಸೇರಿದಂತೆ ಸ್ಥಳೀಯ ಸಂಪನ್ಮೂಲಗಳಿಂದ ಸಂಗ್ರಹಿಸಿ, ಖರ್ಚು ಮಾಡಲು ಪಾಲಿಕೆ ನಿರ್ಧರಿಸಿದೆ.

ಪಾಲಿಕೆಯ ಜಾಗಗಳ ಮಾರಾಟ, ಲೀಸ್‌ನಿಂದ ₹ 30 ಕೋಟಿ ಮತ್ತು ಪಾಲಿಕೆ ಪ್ಲಾಟ್‌ಗಳ ಹರಾಜಿನಿಂದ ₹ 50 ಕೋಟಿ ಸಂಗ್ರಹವಾಗಬಹುದು. ಚುನಾಯಿತಿ ಜನಪ್ರತಿನಿಧಿಗಳು ಹೆಚ್ಚುವರಿಯಾಗಿ ₹ 42 ಕೋಟಿ ಅನುದಾನ ತರುವ ನಿರೀಕ್ಷೆಯಿದೆ ಎನ್ನುತ್ತಾರೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ.

ಪಾಲಿಕೆಯು ಅವಳಿ ನಗರದಲ್ಲಿ 160 ಕಡೆ ವಾಹನ ನಿಲುಗಡೆ ಪ್ರದೇಶಗಳನ್ನು ಗುರುತಿಸಿದ್ದು, ಪಾರ್ಕಿಂಗ್‌ ಸ್ಥಳಗಳ ಅಭಿವೃದ್ಧಿಗೆ ₹ 7 ಕೋಟಿ ಮೀಸಲಿಟ್ಟಿದೆ. ಬೀದಿಬದಿ ವ್ಯಾಪಾರಿಗಳ ವಲಯಕ್ಕೆ ₹ 7.5 ಕೋಟಿ ಮೀಸಲಿಡಲಾಗಿದೆ.

ಚರ್ಚ್‌ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ: ಬೆಂಗಳೂರಿನ ಚರ್ಚ್‌ಸ್ಟ್ರೀಟ್ ಮಾದರಿಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ತಲಾ ಒಂದು ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಇನ್ನು ಜಾಗ ಗುರುತಿಸಿಲ್ಲ.

ಅವಳಿ ನಗರಗಳನ್ನು ಪ್ರವೇಶಿಸುವ ಪ್ರಮುಖ ರಸ್ತೆಗಳಾದ ಗಬ್ಬೂರು ಕ್ರಾಸ್‌, ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ
ವಿವಿಧೆಡೆ ಸೌಂದರ್ಯೀಕರಣಕ್ಕೆ ಒತ್ತು ಕೊಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ₹ 10 ಕೋಟಿ ತೆಗೆದಿರಿಸಲಾಗಿದೆ.

‘ತಿನಿಸು ಕಟ್ಟೆ’ ಮಾದರಿಯಲ್ಲಿ ಮಹಿಳಾ ಬಜಾರ್‌
ಬೆಳಗಾವಿಯಲ್ಲಿರುವ ತಿನಿಸು ಕಟ್ಟೆ ಮಾದರಿಯಲ್ಲಿಯೇ ಅವಳಿ ನಗರಗಳಲ್ಲಿ ತಿನಿಸುಗಳ ಮಾರಾಟಕ್ಕೆ ಮಹಿಳಾ ಬಜಾರ್ ಆರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಒಟ್ಟು ₹ 6 ಕೋಟಿ ಮೀಸಲಿಡಲಾಗಿದೆ.

ಹುಬ್ಬಳ್ಳಿಯಲ್ಲಿ ಪ್ರಮುಖ ಪ್ರದೇಶದಲ್ಲಿ ತಿನಿಸುಗಳಿಗಾಗಿ ಬಜಾರ್‌ಗಳಿವೆ. ಆದ್ದರಿಂದ ಆ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆ ತಿನಿಸು ಬಜಾರ್ ಜೊತೆಗೆ ಕರಕುಶಲ ವಸ್ತುಗಳ ಮಾರಾಟಕ್ಕೆ 56 ಮಳಿಗೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಧಾರವಾಡದಲ್ಲಿ ಕೆಸಿಡಿ ರಸ್ತೆ ಅಥವಾ ಕೆ.ಸಿ. ಪಾರ್ಕ್‌ ಬಳಿ ಮಹಿಳಾ ಬಜಾರ್ ನಿರ್ಮಿಸಲಾಗುತ್ತದೆ. ಇವುಗಳ ನಿಉದ್ಯಾನಗಳ ಅಭಿವೃದ್ಧಿಗೆ ಅನುದಾನ ಹೆಚ್ಚಳ

ಅವಳಿ ನಗರಗಳಲ್ಲಿ ಉದ್ಯಾನಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಈ ಸಲದ ಬಜೆಟ್‌ನಲ್ಲಿ ₹ 20 ಕೋಟಿ ಮೀಸಲಿಡಲಾಗಿದ್ದು, ಹಿಂದಿನ ಬಜೆಟ್‌ಗೆ ಹೋಲಿಸಿದರೆ ಈ ಅನುದಾನ ಮೂರು ಪಟ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ಉದ್ಯಾನಗಳ ಅಭಿವೃದ್ಧಿಗೆ ₹ 5 ಕೋಟಿ ಇತ್ತು.

ಹುಬ್ಬಳ್ಳಿ–ಧಾರವಾಡದಲ್ಲಿ ಸಾಕಷ್ಟು ಉದ್ಯಾನಗಳಿವೆ. ಇವುಗಳಿಗೆ ಈ ಅನುದಾನ ಸಾಲುತ್ತದೆಯೇ ಎಂದು ಇಟ್ನಾಳ ಅವರನ್ನು ಪ್ರಶ್ನಿಸಿದಾಗ ‘ಇಷ್ಟು ಅನುದಾನದಲ್ಲಿ ಎಲ್ಲ ಉದ್ಯಾನಗಳ ಅಭಿವೃದ್ಧಿ ಕಷ್ಟ. ಹಂತ, ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದರು.ರ್ಮಾಣದಿಂದ ಉದ್ಯೋಗ ಸೃಷ್ಟಿಯ ಜೊತೆಗೆ ಮನರಂಜನೆಗೆ ಅನುಕೂಲವಾಗುತ್ತದೆ.

ಅಂಕಿ ಅಂಶ
₹ 128 ಕೋಟಿ:
ರಸ್ತೆ, ಒಳಚರಂಡಿಗೆ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನ
₹ 75 ಕೋಟಿ:2020–21ರಲ್ಲಿ ಸಂಗ್ರಹವಾದ ತೆರಿಗೆ ಹಣ
₹ 58 ಕೋಟಿ:2019-20ರಲ್ಲಿ ಸಂಗ್ರಹವಾದ ತೆರಿಗೆ ಹಣ
₹ 5 ಕೋಟಿ:ಉದ್ಯಾನಗಳ ಅಭಿವೃದ್ದಿಗೆ 2020–21ರಲ್ಲಿದ್ದ ಅನುದಾನ
₹ 10 ಲಕ್ಷ:ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.