ADVERTISEMENT

₹8,550 ಕೋಟಿ ಆದಾಯ ಗಳಿಸಿದ ನೈರುತ್ಯ ರೈಲ್ವೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:51 IST
Last Updated 3 ಮಾರ್ಚ್ 2026, 2:51 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: 2025–26ನೇ ಹಣಕಾಸು ವರ್ಷದ ಫೆಬ್ರವರಿವರೆಗೆ ನೈರುತ್ಯ ರೈಲ್ವೆ ₹8,550 ಕೋಟಿ  ಆದಾಯ ಗಳಿಸಿದ್ದು, ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 14.31ರಷ್ಟು ಹೆಚ್ಚಾಗಿದೆ.

ADVERTISEMENT

ಇದರಲ್ಲಿ ಸರಕು ಸಾಗಣೆಯಿಂದ ₹4,876 ಕೋಟಿ, ಸಾರ್ವಜನಿಕರ ಪ್ರಯಾಣದಿಂದ ₹3,154 ಕೋಟಿ ಆದಾಯ ಬಂದಿದೆ.

ಪ್ರಸಕ್ತ ವರ್ಷ ಫೆಬ್ರುವರಿಯಲ್ಲಿ ಮಾತ್ರ ನೈರುತ್ಯ ರೈಲ್ವೆ ₹780 ಕೋಟಿ ಆದಾಯ ಗಳಿಸಿದೆ. ಸಾರ್ವಜನಿಕರ ಪ್ರಯಾಣದಿಂದ ₹307 ಕೋಟಿ, ಸರಕು ಸಾಗಣೆಯಿಂದ ₹415 ಕೋಟಿ, ವಿವಿಧ ವಾಣಿಜ್ಯ ಆದಾಯ ₹26.38 ಕೋಟಿ ಹಾಗೂ ಟಿಕೆಟ್ ಪರಿಶೀಲನೆಯಿಂದ ₹6.32 ಕೋಟಿ ಆದಾಯ ಬಂದಿದೆ.

ಸರಕು ಸಾಗಣೆ ಕ್ಷೇತ್ರದಲ್ಲಿ 2025–26ನೇ ಹಣಕಾಸು ವರ್ಷದಲ್ಲಿ ಫೆಬ್ರುವರಿವರೆಗೆ 4.75 ಕೋಟಿ ಟನ್ ಮೂಲ ಸರಕು ಸಾಗಣೆ ಮಾಡಲಾಗಿದ್ದು, ಶೇ 16.9 ರಷ್ಟು ಹೆಚ್ಚಳವಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.