ADVERTISEMENT

ರಾಜ್ಯ ಮಟ್ಟದ ತತ್ವಪದ ಸ್ಪರ್ಧೆ 28ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 9:38 IST
Last Updated 25 ಸೆಪ್ಟೆಂಬರ್ 2019, 9:38 IST

ಹುಬ್ಬಳ್ಳಿ: ಕಲಘಟಗಿಯ ಸೋಮಲಿಂಗೇಶ್ವರ ಅಜ್ಜನವರ 39ನೇ ಪುಣ್ಯಾರಾಧನೆ ಅಂಗವಾಗಿ, ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಸೇವಾ ಸಮಿತಿ ಸಹಯೋಗದಲ್ಲಿ ಅ. 28ರಂದು ರಾತ್ರಿ 9 ಗಂಟೆಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ತತ್ವಪದಗಳ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಘದ ಎಂ.ಆರ್. ತೋಟಗಂಟಿ ಹೇಳಿದರು.

ಸ್ಪರ್ಧಿಗಳು ವಚನ ಸಾಹಿತ್ಯ, ದಾಸ ಸಾಹಿತ್ಯ, ನಿಜಗುಣಿ ಶಿವಯೋಗಿಗಳು, ಕಡಕೋಳ ಮಡಿವಾಳಪ್ಪನವರು, ಶರೀಫ ಶಿವಯೋಗಿಗಳು ಹಾಗೂ ಇನ್ನಿತರ ಅನುಭವಿಗಳ ತತ್ವಪದಗಳನ್ನೇ ಹಾಡಬೇಕು. ಪ್ರತಿ ತಂಡ 8 ನಿಮಿಷದಲ್ಲಿ ಭಜನೆಯನ್ನು ಪ್ರಸ್ತುತಪಡಿಸಬೇಕು. ತಂಡದಲ್ಲಿ 8 ಮಂದಿ ಇರಬೇಕು. ರಾಗ, ತಾಳ ಹಾಗೂ ವೇಷಭೂಷಣಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾಗವಹಿಸುವ ತಂಡ ₹501 ನೋಂದಣಿ ಶುಲ್ಕ ಪಾವತಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧೆಯ ಪ್ರಥಮ ವಿಜೇತರಿಗೆ ₹15,001 ನಗದು ಬಹುಮಾನ ಹಾಗೂ ಸ್ಮರಣಿಗೆ, ದ್ವಿತೀಯ ₹11,001, ತೃತೀಯ ₹7,001 ಹಾಗೂ ಚತುರ್ಥ ₹5,001 ಬಹುಮಾನ ನೀಡಲಾಗುವುದು. ನೋಂದಣಿಗೆ ಮೊ: 90086 26441 98452 14975, 97397 97179 ಸಂಪರ್ಕಿಸಬೇಕು ಎಂದರು.

ADVERTISEMENT

ಪರಮಾನಂದ ಮ. ಒಡೆಯರು, ಸೋಮಲಿಂಗ ಮ. ಒಡೆಯರ ಹಾಗೂ ಗುರುಸಿದ್ದಪ್ಪ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.