ADVERTISEMENT

’ಶಿಸ್ತು, ಸಮಯ ಪಾಲಿಸಿ ಅಧ್ಯಯನ ಮಾಡಿ: ಶಂಕರೆಪ್ಪ ಘಟ್ಟಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:12 IST
Last Updated 27 ಫೆಬ್ರುವರಿ 2026, 8:12 IST
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಈಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಈಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು   

ಉಪ್ಪಿನಬೆಟಗೇರಿ: ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಗೆ ಆದ್ಯತೆ ನೀಡಿ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂದು ಧಾರವಾಡ ತಾಲ್ಲೂಕು ಟೀಚರ್ಸ್‌ ಸೊಸೈಟಿ ಅಧ್ಯಕ್ಷ ಶಂಕರೆಪ್ಪ ಘಟ್ಟಿ ಹೇಳಿದರು.

ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ಶಿಕ್ಷಕ ಗೂಡೂಸಾಬ ನದಾಫ್ ಹಾಗೂ ಎನ್‌ಬ್ಲಿಂಗ್ ಲೀಡರ್‌ಶಿಪ್ ಸಂಸ್ಥೆ ಮುಖ್ಯಸ್ಥ ಮಹಾದೇವ ಬಾರಾಟಕ್ಕೆ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ ಅಂಗಡಿ, ಉಪಾಧ್ಯಕ್ಷೆ ದೀಪಾ ಸಿದ್ದಕ್ಕನವರ ಹಾಗೂ ಸದಸ್ಯರು ಮಾತನಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮುಖ್ಯ ಶಿಕ್ಷಕ ಶಾಮಸುಂದರ ದೇಸಾಯಿ, ಪ್ರೇಮಾ ಗುಡಿ, ಗೀತಾ ಉಳ್ಳಿಕಾಶಿ, ಅನುಪಮಾ ಹಳಕೊಪ್ಪ, ಖಾನಬಿ ಬಡೆಖಾನ್ನವರ, ಸುಜಾತಾ ಮುತಾಲಿಕದೇಸಾಯಿ, ಅಶ್ವಿನಿ ಗೊಬ್ಬರಗುಂಪಿ, ಪ್ರತೀಕ್ಷಾ ಕಂಚಗಾರ, ಕುಮಾರಿ ದಾಸನಕೊಪ್ಪ, ಕೃಷ್ಣ ಬೊಂಗಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.