
ಹುಬ್ಬಳ್ಳಿ: ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ವತಿಯಿಂದ ಬೆಂಗಳೂರಿನ ಬ್ರಿಗೇಡ್ ಗೇಟ್‌ವೇನಲ್ಲಿರುವ ಶೆರಟನ್ ಗ್ರ‍್ಯಾಂಡ್ ಹೋಟೆಲ್ ಮತ್ತು ಸಿಟಿ ಸೆಂಟರ್‌ನಲ್ಲಿರುವ ರ್‍ಯಾಡಿಸನ್ ಹೋಟೆಲ್‌ನಲ್ಲಿ ಡಿ.7ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಹಾಲಿಡೇ ಕಾರ್ನಿವಲ್‌ನ ವಿಶೇಷ ಸೌಲಭ್ಯಗಳು ಸಿಗಲಿವೆ.
ಯುರೋಪ್ ಪ್ರವಾಸ ಕೈಗೊಳ್ಳುವವರು ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಕ್ರೂಸ್ ಹಾಲಿಡೇಸ್ ಉಚಿತವಾಗಿ ದೊರೆಯಲಿದೆ. ಸ್ಥಳದಲ್ಲೇ ಬುಕ್ಕಿಂಗ್ ಮಾಡಿದರೆ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ನೀಡಲಾಗಿದೆ.
ಯುರೋಪ್‌ಗೆ ಬೇಸಿಗೆ ಪ್ರವಾಸ ಕೈಗೊಳ್ಳುವವರಿಗೆ ₹1.70 ಲಕ್ಷದಿಂದ ಪ್ಯಾಕೇಜ್‌ಗಳು ಆರಂಭವಾಗುತ್ತವೆ. ತೀರ್ಥಯಾತ್ರೆ ವಿಶೇಷ ಪ್ರವಾಸಗಳು (ಚಾರ್‌ಧಾಮ್, ಅಯೋಧ್ಯೆ), ಲಕ್ಷದ್ವೀಪಕ್ಕೆ ವಿಶೇಷ ಕ್ರೂಸ್ ಪ್ರವಾಸ, ಅಯೋಧ್ಯೆಗೆ ವಿಶೇಷ ಗ್ರೂಪ್ ಟೂರ್‌ಗೆ ಸ್ಪಾಟ್ ಬುಕ್ಕಿಂಗ್‌ನಲ್ಲಿ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ನೀಡಲಾಗಿದೆ.
ಥಾಮಸ್ ಕುಕ್ ಕಂಪನಿಯಿಂದ ಆಸ್ಟ್ರೇಲಿಯಾ, ಜಪಾನ್, ಕೊರಿಯಾ, ದಕ್ಷಿಣ ಆಫ್ರಿಕಾ, ಆಗ್ನೇಯ ಏಷ್ಯಾ, ಜಪಾನ್‌ನ ಗ್ರೀನ್ ಲ್ಯಾಂಡ್‌ಗೆ ಮತ್ತು ದೇಶದ ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಗೋವಾ, ಅಂಡಮಾನ್, ಕೇರಳ, ರಾಜಸ್ಥಾನ, ಗುಜರಾತ್‌ಗೆ ಕ್ರೂಸ್ ಹಾಲಿಡೇಸ್ ಕೂಡ ಲಭ್ಯವಿದೆ.
ಏಳು ದಿನಗಳ ಭೂತಾನ್ ಚಾರ್ಟರ್ ವಿಶೇಷ ಪ್ರವಾಸ ₹99 ಸಾವಿರಕ್ಕೆ ಲಭ್ಯ ಇದೆ. ಯುರೋಪ್ ಗ್ರೂಪ್ ಟೂರ್‌ನಲ್ಲಿ ಪ್ರಾದೇಶಿಕ ಭಾಷೆ (ಕನ್ನಡ) ತಿಳಿದಿರುವ ವ್ಯವಸ್ಥಾಪಕರು ಲಭ್ಯವಿರುತ್ತಾರೆ. ಹಿರಿಯ ನಾಗರಿಕರಿಗೆ ಮಾತ್ರ ವಿಶೇಷ ಪ್ರವಾಸ ಲಭ್ಯವಿದೆ.
ಹಾಲಿಡೇ ಪ್ಲಾನ್‌ಗಾಗಿ ಥಾಮಸ್ ಕುಕ್ ಇಂಡಿಯ ಲಿಮಿಟೆಡ್‌ನ ಮಲ್ಲೆಶ್ವರ, ಎಂ.ಜಿ.ರಸ್ತೆ ಮತ್ತು ಬಸವೇಶ್ವರನಗರ ಶಾಖೆ ಅಥವಾ ಅಶೋಕ ಸೋಮಯಾಜಿ (99640 27269), ಪಾಂಡುರಂಗ ಜಿ.ಎಂ (96209 99066) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.