ADVERTISEMENT

ಕೊರೊನಾ ಹೋರಾಟದ ಸೇನಾನಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 14:38 IST
Last Updated 26 ಏಪ್ರಿಲ್ 2020, 14:38 IST
ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಕಿಮ್ಸ್‌ ವೈದ್ಯರು ಹಾಗೂ ಸಿಬ್ಬಂದಿಯನ್ನು ಭಾನುವಾರ ವಿ.ಬಿ. ಡಂಗನವರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು
ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಕಿಮ್ಸ್‌ ವೈದ್ಯರು ಹಾಗೂ ಸಿಬ್ಬಂದಿಯನ್ನು ಭಾನುವಾರ ವಿ.ಬಿ. ಡಂಗನವರ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು   

ಹುಬ್ಬಳ್ಳಿ: ಕೊರೊನಾ ಸೋಂಕು ಹಿಮ್ಮೆಟ್ಟಿಸಲು ಹೋರಾಡುತ್ತಿರುವ ಕಿಮ್ಸ್‌ ವೈದ್ಯಕೀಯ ಸಿಬ್ಬಂದಿಗೆ ಭಾನುವಾರ ವಿ.ಬಿ. ಡಂಗನವರ ಪ್ರತಿಷ್ಠಾನದ ವತಿಯಿಂದ ಸನ್ಮಾನ ಮಾಡುವ ಮೂಲಕ ವಿಶೇಷವಾಗಿ ಬಸವ ಜಯಂತಿ ಆಚರಿಸಲಾಯಿತು.

ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಸಿ. ಅರುಣಕುಮಾರ, ಉಪ ವೈದ್ಯಕೀಯ ಅಧೀಕ್ಷಕ ರಾಜಶೇಖರ ದ್ಯಾಬೇರಿ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪೂರ, ಎಸ್.ವೈ. ಮುಲ್ಕಿಪಾಟೀಲ, ಆರ್‌ಎಂಒ ಸಿದ್ದೇಶ್ವರ ಕಟಕೋಳ, ಸಿಬ್ಬಂದಿ ಹೇಮೇಂದ್ರ, ಪರಶುರಾಮ ಮಲ್ಯಾಳ, ನಾಗರಾಜ ಜಗತಾಪ, ಮೈನುದ್ದೀನ್, ಪ್ರವೀಣ ವಡ್ಡರ, ಜಿಲ್ಲೆಯ ಮೊದಲ ಕೋವಿಡ್‌ 19 ಪ್ರಕರಣದ ವ್ಯಕ್ತಿ ಬಳಿ ತೆರಳಿ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡದಲ್ಲಿದ್ದ ಈಶ್ವರ ಹಸಬಿ, ಸಚಿನ್ ಹೊಸಕಟ್ಟಿ, ಚೇತನ, ಕಿರಣ, ಶುಶ್ರೂಷೆ ಮಾಡಿದ ಅಣ್ಣಮ್ಮ ಅಕ್ಕಪೌಲ್ ಮತ್ತು ಕಮಲಾ ಅವರನ್ನು ಸನ್ಮಾನಿಸಲಾಯಿತು.

ಕಿಮ್ಸ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ವೈದ್ಯರು, ಶುಶ್ರೂಷಕರು ಮತ್ತ ಡಿ ಗ್ರೂಪ್ ನೌಕರರನ್ನು ಕೂಡ ಗೌರವಿಸಲಾಯಿತು.

ADVERTISEMENT

ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ ‘ಕೊರೊನಾ ಎಂದರೆ ಎಲ್ಲರೂ ಜೀವಭಯದಿಂದ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರ ಪರಿಶ್ರಮದಿಂದ ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿದ್ದು ಕಿಮ್ಸ್‌ನ ಕೀರ್ತಿ ಹೆಚ್ಚಿಸಿದೆ’ ಎಂದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ರಾಜಣ್ಣ ಪವಾರ್, ಸುಪ್ರೀತ್ ಶೆಟ್ಟಿ, ಮಲ್ಲಿಕ್ ಸಿಖಂದರ್, ವೀರೇನ ಡಂಗನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.